ಪುರಿ ಜಗನ್ನಾಥ ದೇವಾಲಯದಲ್ಲಿ ವಸ್ತ್ರಸಂಹಿತೆ ಜಾರಿ?

ಪುರಿ: ಒಡಿಶಾದ ಪ್ರಸಿದ್ಧ ಪುರಿ ಜಗನ್ನಾಥ ದೇವಾಲಯಕ್ಕೆ ಬರುವ ಯಾತ್ರಿಗಳಿಗೆ ಕಟ್ಟುನಿಟ್ಟಿನ ವಸ್ತ್ರಸಂಹಿತೆ ಜಾರಿಗೊಳಿಸುವ ಚಿಂತನೆ ನಡೆಯುತ್ತಿದ್ದು, ದೇವಾಲಯದ ಪಾವಿತ್ರ್ಯತೆ ಕಾಪಾಡುವ ದೃಷ್ಟಿಯಿಂದ ರಾಜ್ಯ ಕಾನೂನು ಆಯೋಗ ಸರ್ಕಾರಕ್ಕೆ ಈ ಬಗ್ಗೆ ಮನವಿ ಸಲ್ಲಿಸಿರುವುದಾಗಿದೆ.

ಆಯೋಗದ ಮನವಿಯಲ್ಲಿ, ಸಾಂಪ್ರದಾಯಿಕ ಉಡುಪುಗಳನ್ನೇ ದೇವಾಲಯಕ್ಕೆ ಪ್ರವೇಶಿಸಲು ಬಯಸುವವರು ಧರಿಸುವಂತೆ, ಅದನ್ನು ಕಡ್ಡಾಯಗೊಳಿಸುವಂತೆ ‌ಶಿಫಾರಸು ಮಾಡಲಾಗಿದೆ. ಜೀನ್ಸ್, ಟಿ ಶರ್ಟ್ ಸೇರಿದಂತೆ ಇನ್ಯಾವುದೇ ರೀತಿಯ ಅಸಭ್ಯ ಎನಿಸುವ ಬಟ್ಟೆಗಳನ್ನು ಧರಿಸದಂತೆಯೂ ಸೂಚಿಸಲಾಗಿದೆ.

ಮಹಿಳೆಯರು ಸೀರೆ, ಚೂಡಿದಾರ ಧರಿಸುವಂತೆ, ಪುರುಷರು ಧೋತಿ, ಪಂಚೆ, ಕುರ್ತಾ, ಪೈಜಾಮ ಧರಿಸುವಂತೆ ಮತ್ತು ಮಕ್ಕಳು ಸಾಂಪ್ರದಾಯಿಕ, ಸರಳ ಉಡುಪುಗಳಿಗಷ್ಟೇ ಅವಕಾಶ ಕಲ್ಪಿಸಬೇಕು ಎಂದು ಆಯೋಗ ಹೇಳಿದೆ.























































 
 

ಆಯೋಗದ ವರದಿಯನ್ನು ಸರ್ಕಾರ ಪರಿಶೀಲನೆ ಮಾಡುತ್ತಿದೆ. ಅನುಮೋದನೆ ದೊರೆತಲ್ಲಿ ಪುರಿ ದೇವಾಲಯ ಪ್ರವೇಶಕ್ಕೆ ಯಾತ್ರಿಗಳು ಸಾಂಪ್ರದಾಯಿಕ ಬಟ್ಚೆಗಳನ್ನೇ ಧರಿಸಬೇಕಾಗುತ್ತದೆ.

error: Content is protected !!
Scroll to Top