ಬೆಂಗಳೂರು: ಪುಟಾಣಿ ಮಗುವಿನ ಶವವೊಂದು ಮಾಗಡಿ ಕೆರೆಯಲ್ಲಿ ತೇಲುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯ ಬಸವಣ್ಣ ದೇಗುಲದ ಬಳಿ ಈ ದೃಶ್ಯ ಕಂಡು ಬಂದಿದೆ. ಗ್ರಾಮ ಪಂಚಾಯತ್ ಸದಸ್ಯರೊಬ್ಬರು ಈ ದೃಶ್ಯವನ್ನು ಮೊದಲು ನೋಡಿದ್ದು, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರ ಮಾಹಿತಿಯನ್ವಯ ಮಗು ಸತ್ತು ಸುಮಾರು ಎರಡು ತಿಂಗಳುಗಳಾಗಿರಬಹುದು ಎಂದು ಅಂದಾಜಿಸಲಾಗಿದೆ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.
ಈ ಬಗ್ಗೆ ತನಿಖೆ ಆರಂಭ ಮಾಡಿರುವ ಪೊಲೀಸರು ಮಗುವಿನ ಈ ಸ್ಥಿತಿಗೆ ಕಾರಣ ಏನು?, ತಾಯಿಯೂ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದಾ?, ಮಗುವನ್ನು ಯಾರಾದರೂ ಕೆರೆಗೆಸೆದು ಕೊಂದಿರಬಹುದಾ? ಎಂಬೆಲ್ಲಾ ಆಯಾಮದಲ್ಲಿ ಉತ್ತರ ಹುಡುಕುತ್ತಿದ್ದಾರೆ.

























