ಬೈಕ್ – ಕಾರುಗಳ ನಡುವೆ ಅಪಘಾತ

ಪುತ್ತೂರು: ಮುಕ್ರಂಪಾಡಿಯ ಕೆಎಸ್‌ಆರ್‌ಟಿಸಿ ಡಿಪೋ ಹತ್ತಿರ ಸರಣಿ ಅಪಘಾತ ಎ. 26 ರಂದು ನಡೆದಿದ್ದು, ಘಟನೆಯಲ್ಲಿ ಬೈಕ್ ಸವಾರರು ಗಾಯಗೊಂಡಿದ್ದಾಗಿ ತಿಳಿದು ಬಂದಿದೆ.

ಬೈಕ್ ಪುತ್ತೂರಿನಿಂದ ‌ಸುಳ್ಯದತ್ತ ತೆರಳುತ್ತಿತ್ತು. ಕಾರುಗಳು ಸುಳ್ಯದಿಂದ ಪುತ್ತೂರಿನ ಕಡೆಗೆ ಸಾಗುತ್ತಿತ್ತು. ಮುಕ್ರಂಪಾಡಿ ಸಮೀಪ ಬೈಕ್ ಮತ್ತು ಕಾರುಗಳ ನಡುವೆ ಮುಖಾಮುಖಿ ಸರಣಿ ಅಪಘಾತ ನಡೆದಿರುವುದಾಗಿದೆ. ಅಪಘಾತದಲ್ಲಿ ಕಾರುಗಳಿಗೂ ತೀವ್ರ ಹಾನಿಯಾಗಿದೆ ಎಂದು ವರದಿಯಾಗಿದೆ.

ಬೈಕ್ ಸವಾರರ ಕಾಲಿಗೆ ಗಾಯವಾಗಿದ್ದು, ಅವರನ್ನು ಸಮೀಪದ ಮೆಡ್‌ಲ್ಯಾಂಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.























































 
 

error: Content is protected !!
Scroll to Top