ಕರಾಯ ಬ್ರಹ್ಮಕಲಶೋತ್ಸವದಲ್ಲಿ ಉಲೂಪಿ ಕಲ್ಯಾಣ ತಾಳಮದ್ದಳೆ

ಪುತ್ತೂರು: ಕರಾಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮ ಕಲಶೋತ್ಸವದ ಪ್ರಯುಕ್ತ ಶ್ರೀ ಮಹೇಶ ಮರ್ದಿನಿ ಯಕ್ಷಕಲಾ ಪ್ರತಿಷ್ಠಾನ (ರಿ )ಚಾರ – ಹೆಬ್ರಿ ಸಂಯೋಜನೆಯಲ್ಲಿ ಚಾರ ಪ್ರದೀಪ ಹೆಬ್ಬಾರ್ ರಚಿತ ಉಲೂಪಿ ಕಲ್ಯಾಣ ತಾಳಮದ್ದಳೆ ಜರಗಿತು.

ಭಾಗವತರಾಗಿ ದೇವಿ ಪ್ರಸಾದ್ ಗುರುವಾಯನಕೆರೆ, ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಪ್ರಚೇತ ಆಳ್ವ ಬಾರ್ಯ ಅರ್ಥಧಾರಿಗಳಾಗಿ ಶ್ರೀಧರ ಎಸ್. ಪಿ. ಕೃಷ್ಣಾಪುರ (ಅರ್ಜುನ), ದಿವಾಕರ ಆಚಾರ್ಯ ಗೇರುಕಟ್ಟೆ(ಉಲೂಪಿ), ಸಂಜೀವ ಪಾರೆಂಕಿ (ಕೌರವ್ಯ), ಚಾರ ಪ್ರದೀಪ ಹೆಬ್ಬಾರ್( ದೃತರಾಷ್ಟ್ರ) ಭಾಗವಹಿಸಿದ್ದರು.

ಬ್ರಹ್ಮಕಲಶೋತ್ಸವ ಸಮಿತಿಯ ಪರವಾಗಿ ಬೊಮ್ಮಯ್ಯ ಬಂಗೇರ ಇವರು ತಂಡದ ಮುಖ್ಯಸ್ಥ ಪ್ರದೀಪ ಹೆಬ್ಬಾರ್ ಅವರನ್ನು ಸ್ಮರಣಿಕೆ ನೀಡಿ ಗೌರವಿಸಿದರು. ಸಂಜೀವ ಪಾರೆಂಕಿ ಸ್ವಾಗತಿಸಿ, ವಂದಿಸಿದರು.























































 
 
error: Content is protected !!
Scroll to Top