ನವದೆಹಲಿ: ಇದೇ ಮೊದಲ ಬಾರಿಗೆ ಹಿಂದೂಯೇತರರನ್ನು ಹೊರತುಪಡಿಸಿ ಹಿಂದೂಗಳಿಗೆ ಮಾತ್ರ ಚಾರ್‌ಧಾಮ್ ಯಾತ್ರೆ ಆರಂಭವಾಗಿದೆ.
ಈ ಬಾರಿ ಹಸಿರು ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಲಾಗಿದ್ದು, ಯಾತ್ರಾರ್ಥಿಗಳು ಇದಕ್ಕೆ ಸಹಕರಿಸುವಂತೆ ಮನವಿ ಮಾಡಲಾಗಿದೆ. ಗಂಗೋತ್ರಿ ಮತ್ತು ಯಮುನೋತ್ರಿ ದ್ವಾರಗಳು ತೆರೆದಿದ್ದು, ಭಕ್ತರು ದೇವರ ದರ್ಶನಕ್ಕಾಗಿ ಕಾತರರಾಗಿದ್ದಾರೆ.
ಇನ್ನು ಸನಾತನ ಹಿಂದೂ ಧರ್ಮೀಯರನ್ನು ಹೊರತು ಪಡಿಸಿ ಇನ್ನುಳಿದವರು ದೇವಾಲಯಕ್ಕೆ ಪ್ರವೇಶಿಸಬೇಕು ಎಂದು ಬಯಸಿದರೆ ಗೋಮೂತ್ರ, ಸಗಣಿ, ಹಾಲು, ಮೊಸರು, ತುಪ್ಪದ ಮಿಶ್ರಣವಾದ ಪಂಚಗವ್ಯ ಸೇವನೆ ಮಾಡಬೇಕು ಎಂದು ತಿಳಿಸಿದೆ. ಹಿಂದೂಯೇತರರು ಸನಾತನ ಧರ್ಮದಲ್ಲಿ ನಂಬಿಕೆ ಇರುವುದನ್ನು ದೃಢಪಡಿಸಿದ ಮೇಲಷ್ಟೇ ಅವರಿಗೆ ದೇಗುಲಗಳಿಗೆ ಪ್ರವೇಶ ಎಂದು ಬದರಿನಾಥ, ಕೇದಾರನಾಥ ದೇಗುಲಗಳ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
ಯಮುನೋತ್ರಿಗೆ ಎಲ್ಲಾ ಭಕ್ತರಿಗೂ ಮುಕ್ತ ಪ್ರವೇಶ ಇದೆ.

























