ಮಾವ – ಅಳಿಯ ಕೆರೆಯಲ್ಲಿ ಮುಳುಗಿ ಸಾವು

ಹಾಸನ: ಜಿಲ್ಲೆಯ ಅರಸೀಕೆರೆಯ ಎನ್ ಹೊಸಳ್ಳಿ ಗ್ರಾಮದಲ್ಲಿ ಮಾವ ಮತ್ತು ಅಳಿಯ ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.

ಮೃತರನ್ನು ‌ಮಾವ ಪ್ರಭಾಕರ್ (45) ಮತ್ತು ಪ್ರತೀಕ್ (12) ಎಂದು ಗುರುತಿಸಲಾಗಿದೆ.

ಸೋಮನಹಳ್ಳಿಯ ಪ್ರತೀಕ್ ಬೇಸಿಗೆ ರಜೆಯ ಪ್ರಯುಕ್ತ ಮಾವ ಪ್ರಭಾಕರ್ ಅವರ ಮನೆಗೆ ಬಂದಿದ್ದ. ಮಾವ ಮತ್ತು ಅಳಿಯ ಕೆರೆಯ ಏರಿ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಅಳಿಯ ಪ್ರತೀಕ್ ಕಾಲು ಜಾರಿ ಕೆರೆಗೆ ಬಿದ್ದಿದ್ದಾನೆ. ಆತನ ರಕ್ಷಣೆಗೆ ಪ್ರಭಾಕರ್ ಸಹ ನೀರಿಗೆ ಇಳಿದಿದ್ದು, ಈಜು ಬಾರದ ಕಾರಣ ಇಬ್ಬರೂ ಮೇಲೆ ಬರಲಾರದೆ ಮೃತಪಟ್ಚಿದ್ದಾರೆ.























































 
 

ಮೃತದೇಹಗಳನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಕೆರೆಯಿಂದ ಹೊರ ತೆಗೆದಿದ್ದಾರೆ. ಗಂಡಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

error: Content is protected !!
Scroll to Top