ಬೀದರ್‌ನಲ್ಲಿ ಬಿಸಿಲಿನ ತಾಪಕ್ಕೆ ಓರ್ವ ಬಲಿ

ಬೀದರ್: ಸೂರ್ಯನ ತಾಪಕ್ಕೆ ಕರ್ನಾಟಕ ಕೊತಕೊತ ಕುದಿಯುತ್ತಿದ್ದು, ಬಿಸಿಲಿನ ಹೊಡೆತಕ್ಕೆ ಬೀದರ್‌ನಲ್ಲಿ ಓರ್ವ ವ್ಯಕ್ತಿ ಬಿದ್ದು ಮೃತಪಟ್ಟ ಘಟನೆ ನಡೆದಿದೆ.

ಹೀಟ್ ಸ್ಟ್ರೋಕ್‌ಗೆ ಬಲಿಯಾದ ವ್ಯಕ್ತಿಯನ್ನು ಉತ್ತರ ಪ್ರದೇಶ ಮೂಲದ ಮೊಹಮದ್ ಸಮೀರ್ ಲಯಿಕ್ ಅಹ್ಮದ್ ಎಂದು ಗುರುತಿಸಲಾಗಿದೆ. ಕಮಲನಗರದ ಡಿಗ್ಗಿ ‌ನಗರಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿ -50 ರಲ್ಲಿ ಈ ಘಟನೆ ನಡೆದಿದೆ.

ಕಮಲಾ ನಗರದ ಸಲೂನ್ ಒಂದರಲ್ಲಿ ಲಯೀಕ್ ಕೆಲಸ ಮಾಡುತ್ತಿದ್ದುದಾಗಿ ತಿಳಿದು ಬಂದಿದೆ. ಸಮೀಪದ ಮೆಕ್ಯಾನಿಕ್ ಅಂಗಡಿ ಒಂದರ ಬಳಿ ಬಂದು ನೀರು ಕುಡಿದಿದ್ದು, ಆ ಬಳಿಕ ತಲೆ ಸುತ್ತುತ್ತಿರುವುದಾಗಿ ಹೇಳಿದ್ದಾರೆ. ಅಲ್ಲಿ ಕೊಂಚ ವಿಶ್ರಮಿಸಿದ ಬಳಿಕ ಡಿಗ್ಗಿ ಗ್ರಾಮಕ್ಕೆ ತೆರಳುವುದಾಗಿ ಹೋಗಿದ್ದಾರೆ. ತಕ್ಷಣವೇ ಕುಸಿದು ಬಿದ್ದ ಲಯೀಕ್ ಅಹ್ಮದ್, ಅಲ್ಲೇ ಮೃತಪಟ್ಟಿದ್ದಾಗಿ ತಿಳಿದು ಬಂದಿದೆ.























































 
 

ಮರಣೋತ್ತರ ಪರೀಕ್ಷೆಯ ಬಳಿಕ ಸಾವಿನ ನಿಖರ ಕಾರಣ ತಿಳಿದು ಬರಬೇಕಿದೆ.

error: Content is protected !!
Scroll to Top