ಮಗುವಿನ ಚೈನ್ ಕಳ್ಳತನ: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವ್ಯಕ್ತಿಯಲ್ಲ ಕಳ್ಳ

ವಿಟ್ಲ: ಕೊಡಪದವು ಪ್ರದೇಶದಲ್ಲಿ ಎ. 12 ರಂದು 7 ವರ್ಷದ ಮಗುವಿನ ಕತ್ತಿನಿಂದ ಅಪರಿಚಿತ ಬೈಕ್ ಸವಾರನೊಬ್ಬ 7 ಗ್ರಾಂ ತೂಕದ ಬಂಗಾರದ ಸರವನ್ನು ಎಗರಿಸಿದ್ದು, ಈ ಬಗ್ಗೆ ವಿಟ್ಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ಪ್ರಕರಣದ ಆರೋಪಿ ಎಂದು ಕೆ.ಟಿ.ಎಂ. ಬೈಕ್ ಸವಾರನೊಬ್ಬನನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗುತ್ತಿದ್ದು, ಆತನನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಆ ವ್ಯಕ್ತಿಗೆ ಮತ್ತು ಪ್ರಕರಣಕ್ಕೆ ಯಾವುದೇ ರೀತಿಯ ಸಂಬಂಧ ಇಲ್ಲ ಎನ್ನುವುದು ತಿಳಿದು ಬಂದಿದೆ.

ಆದ್ದರಿಂದ ಆ ಬೈಕ್ ಸವಾರನ ಮೇಲೆ ಯಾವುದೇ ರೀತಿಯ ತಪ್ಪು ಅಭಿಪ್ರಾಯ ಸಮಾಜದಲ್ಲಿ ಮೂಡಬಾರದು ಎನ್ನುವ ಕಾರಣಕ್ಕೆ, ಅತನ ಕುಟುಂಬದವರ ಮನವಿಯ ಮೇಲೆ ಪೊಲೀಸರು ಈ ಸ್ಪಷ್ಟನೆ ನೀಡಿರುವುದಾಗಿದೆ.























































 
 

error: Content is protected !!
Scroll to Top