ದೇವಾಲಯ ಅಪವಿತ್ರ: ಪ್ರವಾಸಿಗರ ವಿರುದ್ಧ ಭಕ್ತರ ಆಕ್ರೋಶ

ಚಿಕ್ಕಮಗಳೂರು: ಮೂಡಿಗೆರೆಯ ದುರ್ಗದಹಳ್ಳಿಯ ಕಾಲಭೈರವೇಶ್ವರ ದೇವಾಲಯದ ಆವರಣದಲ್ಲಿ ಮದ್ಯಪಾನ, ಧೂಮಪಾನ‌ದ ಮೂಲಕ ಪ್ರವಾಸಿಗರು ದೇಗುಲದ ಪಾವಿತ್ರ್ಯತೆಗೆ ಭಂಗ ತರುತ್ತಿದ್ದು, ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ದೇಗುಲದ ಆವರಣದಲ್ಲಿ ಸಿಗರೇಟು ಸೇದುತ್ತಿದ್ದ ವ್ಯಕ್ತಿಯನ್ನು ಭಕ್ತರು ತರಾಟೆಗೆ ತೆಗೆದುಕೊಂಡ ಘಟನೆ ಸಹ ನಡೆದಿದೆ.

ಕೆಲವು ಪ್ರವಾಸಿಗರು ದೇವಾಲಯದ ಸುತ್ತ ಅನೈತಿಕ ಚಟುವಟಿಕೆಗಳನ್ನೂ ನಡೆಸುತ್ತಿದ್ದು, ಇದಕ್ಕೆ ದೇವಾಲಯದ ಆಡಳಿತ ಮಂಡಳಿ ಮತ್ತು ಅರಣ್ಯ ಇಲಾಖೆಯ ನಿರ್ಲಕ್ಷ್ಯ ಕಾರಣ ಎಂದು ಭಕ್ತರು ದೂರುತ್ತಿದ್ದಾರೆ. ದೇವಸ್ಥಾನದ ಪಾವಿತ್ರ್ಯ ಕಾಪಾಡುವ ನಿಟ್ಟಿನಲ್ಲಿ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳುವಂತೆಯೂ ಇದೇ ಸಂದರ್ಭದಲ್ಲಿ ಭಕ್ತರು ಆಗ್ರಹಿಸಿದ್ದಾರೆ.























































 
 

error: Content is protected !!
Scroll to Top