ಪುತ್ತೂರು: ಪತಂಜಲಿ ಯೋಗ ಶಿಕ್ಷಣ ಸಮಿತಿ ರಿ. ಕರ್ನಾಟಕ, ಕೇಂದ್ರ ಕಚೇರಿ ತುಮಕೂರು ಇದರ ಕ್ಷೀರ ಸಂಗಮ ಸಭಾಭವನ ಕಳಿಯ ಗೇರುಕಟ್ಟೆ ಶಾಖೆಯಲ್ಲಿ ಪಂಚಾಂಗ ಪಠಣ, ಭಜನಾ ಸಂಕೀರ್ತನೆ, ಧ್ಯಾನ, ಸೂರ್ಯ ನಮಸ್ಕಾರ ಅಮೃತ ಫಲಹಾರದೊಂದಿಗೆ ಸೌರ ಯುಗಾದಿಯನ್ನು ಆಚರಿಸಲಾಯಿತು.
ಹಿರಿಯ ಯೋಗ ಬಂದು ಭಾರತಿ ಸೌರ ಯುಗಾದಿಯ ಬಗ್ಗೆ ಬೌದ್ಧಿಕ ನೀಡಿದರು.
ಕೇಂದ್ರದ ಸಂಚಾಲಕ ವಿಜಯ, ಅಶೋಕ, ದಿವಾಕರ ಆಚಾರ್ಯ, ಸತೀಶ, ಶಿವಣ್ಣ, ಪದ್ಮಲತಾ, ಹರ್ಷಿತಾ ಮೊದಲಾದವರು ಭಾಗವಹಿಸಿದ್ದರು.
























