ಮೈಗೆ ವಿದ್ಯುತ್‌ ಹರಿಸಿಕೊಂಡು ಕಾರ್ಮಿಕ ಆತ್ಮಹತ್ಯೆ

ಬೆಳ್ತಂಗಡಿ: ಹೊಸಂಗಡಿ ಗ್ರಾಮದ ಪಾರ್ದೊಟ್ಟು ಎಂಬಲ್ಲಿ ಕೇರಳದಿಂದ ರಬ್ಬರ್ ಟ್ಯಾಪಿಂಗ್ ಕೆಲಸಕ್ಕೆಂದು ಬಂದಿದ್ದ ಕಾರ್ಮಿಕನೋರ್ವ ಸ್ವತಹ ಮೈಮೇಲೆ ವಿದ್ಯುತ್ ಹರಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದ್ದು ಈ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕೇರಳ ಮೂಲದ ಕಾರ್ಮಿಕ ಜೋಸೆಫ್ ತೋಮಸ್ (69) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ಹೊಸಂಗಡಿಯ ಶಾಜು.ಪಿ.ಟಿ ಎಂಬವರ ರಬ್ಬರ್ ತೋಟದಲ್ಲಿ ಕಾರ್ಮಿಕನಾಗಿ ಕೆಲಸ ಮಾಡಿಕೊಂಡಿದ್ದು, ಮೃತದೇಹ ಮಾ. 30ರಂದು ಸಂಜೆಯ ವೇಳೆ ಶಾಜು ಅವರ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿ ಕಂಡು ಬಂದಿದೆ.

error: Content is protected !!
Scroll to Top