ಪತ್ನಿಯ ವಿಕೃತ ಬೇಡಿಕೆ : ಪೊಲೀಸ್‌ ಠಾಣೆ ಮೆಟ್ಟಿಲೇರಿದ ಪತಿ

ಪತ್ನಿಯ ಕಾಟದಿಂದ ಮುಕ್ತಿ ಕೊಡುವಂತೆ ಪೊಲೀಸರಿಗೆ ಮೊರೆ

ಬೆಂಗಳೂರು: ಪತ್ನಿಯ ಲೈಂಗಿಕ ವಿಕೃತಿ ಮತ್ತು ನಿರಂತರ ಕಿರುಕುಳ ತಾಳಲಾರದೆ ಪತಿ ಪೊಲೀಸ್ ಠಾಣೆಯ ಮೆಟ್ಟಿಲೇರಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಪತ್ನಿಯ ಮಾನಸಿಕ ಹಿಂಸೆ, ಲೈಂಗಿಕ ದೌರ್ಜನ್ಯ ತಾಳಲಾರದೆ ಪತಿ ಬೆಂಗಳೂರಿನ ಅಮೃತಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ಪತ್ನಿಯ ವಿಪರೀತ ವಿಕೃತ ಲೈಂಗಿಕ ಬೇಡಿಕೆ, ತಾನು ಮಾತ್ರವಲ್ಲದೆ ತನ್ನ ಸ್ನೇಹಿತೆಯ ಜೊತೆಗೂ ದೈಹಿಕ ಸಂಬಂಧ ಹೊಂದುವಂತೆ ಒತ್ತಾಯಿಸುತ್ತಿದ್ದಾಳೆಂದು ದೂರಿನಲ್ಲಿ ತಿಳಿಸಿದ್ದಾರೆ.

ನನ್ನ ಪತ್ನಿ ಅಶ್ಲೀಲ ವೀಡಿಯೋಗಳನ್ನು ಕಳುಹಿಸಿ ವಿಕೃತವಾಗಿ ವರ್ತಿಸುತ್ತಾಳೆ. ಸ್ನೇಹಿತೆಯರ ಜೊತೆ ಸ್ವೀಟ್ ಮೆಮೋರಿ ಹಂಚಿಕೊಳ್ಳುವಂತೆ ಒತ್ತಾಯಿಸುತ್ತಾಳೆ. ಮದುವೆಗೂ ಮುನ್ನ ಆಕೆಯ ಸಂಬಂಧಗಳ ಬಗ್ಗೆ ಹೇಳಿ ಕಿರಿಕಿರಿ ಉಂಟುಮಾಡುತ್ತಾಳೆ. ಅಷ್ಟೇ ಅಲ್ಲ ಕುಡಿದು ಬರುವುದು, ಸ್ನೇಹಿತರ ಜೊತೆ ಅಲೆದಾಡುವುದು ಇಂದಿನ ಕಾಲದಲ್ಲಿ ಕಾಮನ್ ಎಂದು ಹೇಳಿ ವಿಕೃತವಾಗಿ ವರ್ತಿಸುತ್ತಾಳೆ. ವಿಕೃತ ದೈಹಿಕ ಸಂಪರ್ಕಕ್ಕೆ ಒಪ್ಪದಿದ್ದಾಗ ಕಿರುಕುಳ ನೀಡುತ್ತಾಳೆ ಎಂದು ಪತಿ ದೂರಿನಲ್ಲಿ ಆರೋಪಿಸಿದ್ದಾರೆ.























































 
 

ಪತ್ನಿಯ ಈ ಅಸಲಿ ಮುಖ ತಿಳಿಯುವ ಮುನ್ನವೇ ಆಕೆಗೆ ಒಡವೆಗಳನ್ನು ಕೊಟ್ಟಿದ್ದೇನೆ. ಆ ಒಡವೆಗಳನ್ನೂ ವಾಪಸ್ ನೀಡದೆ ಸತಾಯಿಸುತ್ತಿದ್ದಾಳೆ ಎಂದು ಪತಿ ತನ್ನ ಅಳಲು ತೋಡಿಕೊಂಡಿದ್ದಾರೆ. ಈ ಸಂಬಂಧ ಅಮೃತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

error: Content is protected !!
Scroll to Top