ನವಮಂಗಳೂರು ಬಂದರಿನಲ್ಲಿ ಮುಗಿಲೆತ್ತರ ಚಿಮ್ಮಿದ ಸುಂಟರಗಾಳಿ

ಮಂಗಳೂರು: ನವಮಂಗಳೂರು ಬಂದರು ಒಳಗಡೆ ಭಾನುವಾರ ಸುಂಟರಗಾಳಿ ಕಾಣಿಸಿಕೊಂಡು ಮುಗಿಲೆತ್ತರ ಚಿಮ್ಮಿದ್ದು ಕುತೂಹಲಕ್ಕೆ ಕಾರಣವಾಗಿತ್ತು. ಪಣಂಬೂರಿನಲ್ಲಿರುವ ನವಮಂಗಳೂರು ಬಂದರಿನಲ್ಲಿ ಕಲ್ಲಿದ್ದಲು ರಾಶಿ ಹಾಕಿರುವ‌ ಸ್ಥಳದಲ್ಲಿ ಭಾರಿ ಸುಂಟರಗಾಳಿ ಎದ್ದಿದೆ.

ಕಪ್ಪು ಮಿಶ್ರಿತ ಮಣ್ಣಿನೊಂದಿಗೆ ನೆಲದಿಂದ ಆಕಾಶದೆತ್ತರಕ್ಕೆ ಸುಂಟರಗಾಳಿ ಹೋಗಿತ್ತು. ಬುಗುರಿ ತಿರುಗಿದಂತೆ ತಿರುಗಿದ ಸುಂಟರಗಾಳಿಯ ದೃಶ್ಯವನ್ನು ಸ್ಥಳೀಯರು ಮೊಬೈಲಿನಲ್ಲಿ ಸೆರೆ ಹಿಡಿದಿದ್ದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

error: Content is protected !!
Scroll to Top