ರಂಗಭೂಮಿ ಕಲಾವಿದ ಟಿ. ಪ್ರಭಾಕರ್ ನಿಧನ

ಉಡುಪಿ: ಕಾಂತಾರ ‌ಚಿತ್ರದಲ್ಲಿ ನಟಿಸಿದ್ದ ಹಿರಿಯ ರಂಗಭೂಮಿ ಕಲಾವಿದ ಟಿ. ಪ್ರಭಾಕರ್ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಮೃತರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ.

ಹೆಬ್ರಿ ತಾಲೂಕಿನ ಪೆರ್ಡೂರಿನವರಾದ ಪ್ರಭಾಕರ್ ಅವರು ಬ್ಯಾಂಕ್ ಆಫ್ ಬರೋಡಾ‌ದಲ್ಲಿ ‌ಕಾರ್ಯ ನಿರ್ವಹಿಸಿ ನಿವೃತ್ತರಾದವರು. ರಂಗಭೂಮಿಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಇವರು ನಾಟಕಗಳಲ್ಲಿಯೂ ಅಭಿನಯಿಸಿದವರು.





















































 
 

ಮೃತರು ಪತ್ನಿ ಮತ್ತು ಪುತ್ರನನ್ನು ಅಗಲಿದ್ದಾರೆ.

error: Content is protected !!
Scroll to Top