ಕುಂದಾಪುರ: ಕಾಂತಾರ ಚಿತ್ರದ ಆರಂಭದಲ್ಲಿನ ಕಂಬಳದ ಸನ್ನಿವೇಶದಲ್ಲಿ ಕಾಣಿಸಿಕೊಂಡಿದ್ದ ಕೋಣ ಅಪ್ಪು ವಿಧಿವಶವಾಗಿದೆ.
ಬೋಳಂಬಳ್ಳಿ ಚೈತ್ರಾ ಪರಮೇಶ್ವರ ಭಟ್ ಅವರಿಗೆ ಸೇರಿದ ಕೋಣ ಇದಾಗಿದ್ದು, ದೇಶವಿದೇಶದಲ್ಲಿ ಸದ್ದು ಮಾಡಿದ್ದ ಕಾಂತಾರ ಚಿತ್ರದಲ್ಲಿ ಇನ್ನೊಂದು ಕೋಣದ ಜೊತೆಗೆ ಕಂಬಳದ ಸನ್ನಿವೇಶದಲ್ಲಿ ಇದನ್ನು ಬಳಕೆ ಮಾಡಲಾಗಿತ್ತು.
ಮೃತ ಅಪ್ಪು ಕೋಣವು ಕಂಬಳದ ನೇಗಿಲು ಜೂನಿಯರ್ ವಿಭಾಗದಲ್ಲಿ ಎರಡು ಬಾರಿ ಸರಣಿ ಶ್ರೇಷ್ಟ ಪ್ರಶಸ್ತಿ ಪಡೆದಿತ್ತು. ಹಾಗೆಯೇ ಕುಂದಾಪುರದ ಸಾಂಪ್ರದಾಯಿಕ ಕಂಬಳಗಳಲ್ಲಿ ಐದು ವರ್ಷ ಚಾಂಪಿಯನ್ ಪಟ್ಟಕ್ಕೇರಿತ್ತು. 2023 ರಲ್ಲಿ ಬೆಂಗಳೂರಿನಲ್ಲಿ ನಡೆದ ಕಂಬಳದ ಕೆನೆಹಲಗೆ ವಿಭಾಗದಲ್ಲಿ ಪ್ರಥಮ ಪ್ರಶಸ್ತಿ ಪಡೆದಿತ್ತು. ಬಂಟ್ವಾಳ, ಮುಲ್ಕಿ, ಮಂಗಳೂರು ಕಂಬಳಗಳಲ್ಲಿಯೂ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು.
























