ಬೆಂಗಳೂರು: ಭಾರತೀಯ ಜನತಾ ಪಕ್ಷದ ಮಾತನ್ನು ಕೇಳುವವರೇ ಚುನಾವಣಾ ಆಯೋಗದಲ್ಲಿದ್ದಾರೆ. ಚು. ಆಯೋಗ ಬಿಜೆಪಿಯ ಬ್ರಾಂಚ್ ಆಫೀಸ್ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಫ್ರೀಡಂ ಪಾರ್ಕ್ನಲ್ಲಿ ನಡೆದ ಪ್ರತಿಭಟನಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಈ ವಿಷಯಕ್ಕೆ ದೇಶದಲ್ಲಿ ಹೋರಾಟ ಮಾಡುತ್ತಿರುವವರು ರಾಹುಲ್ ಗಾಂಧಿ ಒಬ್ಬರೇ. ಬಿಜೆಪಿ ಅಧಿಕಾರಕ್ಕಾಗಿ ಆಸೆ ಪಡುವ ಪಕ್ಷ. ಅದು ತನಿಖಾ ಸಂಸ್ಥೆಗಳನ್ನು, ಹಿಂದುಳಿದವರನ್ನು ಬೆದರಿಸಿ ಅಧಿಕಾರ ಪಡೆಯುತ್ತದೆ ಎಂದು ಆರೋಪಿಸಿದ್ದಾರೆ.
ಸಂವಿಧಾನ ಉಳಿಯಬೇಕಾದರೆ ಬಿಜೆಪಿ ಅಧಿಕಾರದಲ್ಲಿ ಇರಬಾರದು. ಸಂವಿಧಾನ ರಕ್ಷಣೆ ಮಾಡಿದರೆ ನಮ್ಮನ್ನು ನಾವು ರಕ್ಷಣೆ ಮಾಡಿದಂತೆ. ಸಂವಿಧಾನದಲ್ಲಿ ನಂಬಿಕೆ ಇರುವವರು ಆಡಳಿತ ನಡೆಸಿದರೆ ಸಮಾನತೆ ಸೃಷ್ಟಿಯಾಗುತ್ತದೆ. ಕಾಂಗ್ರೆಸ್, ರಾಹುಲ್ ಗಾಂಧಿ ಅಧಿಕಾರಕ್ಕೆ ಬಂದರೆ ಮಾತ್ರ ಇದು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.
























