18 ಪಾಕ್‌ ಸೈನಿಕರನ್ನು ಸಾಯಿಸಿದ ಬಂಡುಕೋರರು

ಕಾರ್ಯಾಚರಣೆಯಲ್ಲಿ 23 ಬಂಡುಕೋರರ ಹತ್ಯೆ

ಇಸ್ಲಾಮಾಬಾದ್‌: ಬಲೂಚಿಸ್ಥಾನದ ವಾಯುವ್ಯ ಭಾಗದಲ್ಲಿ ಪ್ರತ್ಯೇಕತಾವಾದಿ ದಂಗೆಕೋರರೊಂದಿಗಿನ ಘರ್ಷಣೆಯಲ್ಲಿ ಪಾಕಿಸ್ಥಾನದ 18 ಸೈನಿಕರು ಸಾವಿಗೀಡಾಗಿದ್ದಾರೆ. ಇದೇ ವೇಳೆ 23 ಬಂಡುಕೋರರನ್ನು ಸೈನಿಕರು ಕೊಂದಿದ್ದಾರೆ.

ಅಫ್ಘಾನಿಸ್ಥಾನದ ಗಡಿಯಲ್ಲಿರುವ ಕಲಾತ್‌ನಲ್ಲಿ ಪ್ರಮುಖ ಹೆದ್ದಾರಿಯಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿದ ದಂಗೆಕೋರರ ವಿರುದ್ಧ ನಡೆಸಿದ ಗುಂಡಿನ ದಾಳಿಯಲ್ಲಿ ಸೈನಿಕರು ಪಾಕ್‌ ಸೈನಿಕರು ಮೃತಪಟ್ಟಿದ್ದಾರೆ ಎಂದು ಸೇನೆ ತಿಳಿಸಿದೆ. ಶನಿವಾರ ಬೆಳಗ್ಗಿನಿಂದ ತೊಡಗಿ ರಾತ್ರಿಯಿಡೀ ಬಂಡುಕೋರರ ವಿರುದ್ಧ ನಡೆದ ಹೋರಾಟದ ನಂತರ ಭದ್ರತಾ ಪಡೆಗಳು ರಸ್ತೆ ತಡೆಯನ್ನು ತೆರವುಗೊಳಿಸುವಲ್ಲಿ ಯಶಸ್ವಿಯಾಗಿವೆ.





















































 
 

ಕಳೆದ ಡಿಸೆಂಬರ್‌ನಲ್ಲಿ ಭದ್ರತಾ ಪಡೆಗಳು 925 ದಂಗೆಕೋರರನ್ನು ಕೊಂದಿದ್ದವು. ಇದು ಕಳೆದ ಐದು ವರ್ಷಗಳಿಗೆ ಹೋಲಿಸಿದರೆ ದಾಖಲೆಯ ಗರಿಷ್ಠ ಮಟ್ಟದ್ದಾಗಿದೆ. ಆದರೆ ಕಳೆದ ವರ್ಷ ಇಂತಹ ಕಾರ್ಯಾಚರಣೆಗಳಲ್ಲಿ 383 ಪಾಕ್‌ ಸೈನಿಕರು ಸಾವನ್ನಪ್ಪಿದ್ದರು. ಬಂಡುಕೋರರ ದಾಳಿಗಳನ್ನು ಪಾಕಿಸ್ಥಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಮತ್ತು ಪ್ರಧಾನಿ ಶೆಹಬಾಜ್ ಷರೀಫ್ ಹಾಗೂ ಬಲೂಚಿಸ್ಥಾನದ ಪ್ರಾಂತೀಯ ನಾಯಕರು ಖಂಡಿಸಿದ್ದಾರೆ. ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಿದ್ದಕ್ಕೆ ಸೇನೆಯನ್ನು ಶ್ಲಾಘಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top