ಪುತ್ತೂರು: ಪುತ್ತೂರು ತಾಲೂಕಿನ ಬೊಳಿಕಳ, ಪುಣ್ಚಪ್ಪಾಡಿ ಗ್ರಾಮದ ನೂಜಾಜೆ, ಅಂಜಯ, ಪಾಲ್ತಾಡಿ ಗ್ರಾಮದ ಅಸಂತಡ್ಕ, ಖಂಡಿಗೆ, ಕೆಯ್ಯೂರು ಗ್ರಾಮದ ಓಲೆಮುಂಡೋವು ಪ್ರದೇಶದಲ್ಲಿ ಕಾಡಾನೆ ದಾಳಿ ನಡೆಸಿದೆ.
ಕಾಡಾನೆ ದಾಳಿ ನಡೆಸಿದ ಪರಿಣಾಮ ಕೃಷಿ ತೋಟಗಳಿಗೆ ಹಾನಿಯಾಗಿದೆ.
ದಾಳಿ ನಡೆಸಿದ ಸ್ಥಳಗಳಿಗೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ ನೀಡಿದರು. ಶಾಸಕರ ಜೊತೆ ಪ್ರಮುಖರಾದ ರಾಕೇಶ್ ರೈ ಕೆಡೆಂಜಿ, ಇಂದಿರಾ ಬಿ.ಕೆ, ತಾರಾನಾಥ ಕಾಯರ್ಗ, ಸತೀಶ್ ಅಂಗಡಿಮೂಲೆ, ಪ್ರಕಾಶ್ ರೈ ಸಾರಕರೆ ಮೊದಲಾದರಿದ್ದರು.
























