ಸವಣೂರು: ಮಾರ್ಚ್ 2024 ರಲ್ಲಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಶಿಫಾಲಿ ರೈ 588 ಅಂಕ ಗಳಿಸಿದ್ದು, ಇದೀಗ ಮರು ಮೌಲ್ಯಮಾಪನದಲ್ಲಿ ಹೆಚ್ಚುವರಿ 14 ಅಂಕಗಳನ್ನು ಗಳಿಸಿ ಒಟ್ಟು 602 (ಶೇ.96.32) ಅಂಕಗಳನ್ನು ಪಡೆದಿದ್ದಾರೆ.
ಕನ್ನಡ-124, ಇಂಗ್ಲೀಷ್ 97, ಹಿಂದಿ-100, ಗಣಿತ-93, ವಿಜ್ಞಾನ-91 ಹಾಗೂ ಸಮಾಜ ವಿಜ್ಞಾನದಲ್ಲಿ 97 ಅಂಕಗಳನ್ನು ಪಡೆದಿದ್ದಾರೆ
ಶಿಫಾಲಿ ರೈ ಪ್ರವೀಣ ರೈ ಮತ್ತು ಅನಿತಾ ಶೆಟ್ಟಿ ನೂಜಾಜೆ ದಂಪತಿ ಪುತ್ರಿ.
ವಿದ್ಯಾರ್ಥಿನಿಯನ್ನು ಶಾಲಾ ಸಂಚಾಲಕ ಸವಣೂರು ಸೀತಾರಾಮ ರೈ ಮತ್ತು ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ, ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ ಎಂದು ಪ್ರಾಡಂಶುಪಾಲ ಸೀತಾರಾಮ ಕೇವಳ ತಿಳಿಸಿದ್ದಾರೆ.
























