ಕೆದಿಲ: ಬಡತನದಲ್ಲಿರುವ ಕೆದಿಲ ಗ್ರಾಮದ ವಳಂಗಜೆ ಜಾನಕಿಯವರಿಗೆ ಮಾಸಾಸನದ ಮಂಜೂರಾತಿ ಪತ್ರವನ್ನು ಹಸ್ತಾಂತರಿಸಲಾಯಿತು.
ಮಾಸಾಸನದ ಕುರಿತು ಪೆರ್ನೆ ಕೆದಿಲ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಾದ ಜಗದೀಶ, ಗಿರೀಶ, ಶೀನಪ್ಪ ಅವರು ಪೆರ್ನೆ ವಲಯ ಮೇಲ್ವಿಚಾರಕಿ ಶಾರದ ಅವರ ಗಮನಕ್ಕೆ ತಂದಿದ್ದರು. ಇದೀಗ ಮಂಜೂರಾತಿ ಪತ್ರ ನೀಡಲಾಗಿದೆ.
75 ವರ್ಷದ ಪ್ರಾಯದ ಜಾನಕಿ ಅವರು ಒಂದು ಹೊತ್ತಿನ ಅನ್ನಕ್ಕೂ ಕಷ್ಟ ಪಡುತ್ತಿದ್ದು, ಗಂಡ ಹಾಗೂ ಐದು ಗಂಡು ಮಕ್ಕಳನ್ನು ಕಳಕೊಂಡಿದ್ದಾರೆ.
ವಲಯ ಮೇಲ್ವಿಚಾರಕಿ ಶಾರದಾ ಮತ್ತು ಜ್ಞಾನವಿಕಾಸ ಸಮನ್ವಯಾಧಿಕಾರಿ ಜಯಲಕ್ಷ್ಮಿ ಮಂಜೂರಾತಿ ಪತ್ರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸೇವಾ ಪ್ರತಿನಿಧಿಗಳಾದ ಶಾರದ, ಜಯಂತಿ, ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಾದ ಜಗದೀಶ, ಶೀನಪ್ಪ ಗಿರೀಶ ಮತ್ತು ಒಕ್ಕೂಟದ ಅಧ್ಯಕ್ಷರು ಉಪಸ್ಥಿತರಿದ್ದರು
























