ಚಾರ್ಮಾಡಿ: 12 ಚಕ್ರದ ಲಾರಿಯೊಂದು ತಿರುವಿನಲ್ಲಿ ಚಲಿಸಿ ಟರ್ನ್ ಮಾಡಲಾಗದೇ ಟ್ರಾಫಿಕ್ ಜಾಮ್ ಉಂಟಾದ ಪರಿಣಾಮ ವಾಹನ ಸವಾರರು ಪರದಾಡಿದ ಘಟನೆ ಚಾರ್ಮಾಡಿ ಘಾಟ್ ನ 10ನೇ ತಿರುವಿನಲ್ಲಿ ನಡೆದಿದೆ.
ಬಳ್ಳಾರಿಯಿಂದ ಮಂಗಳೂರಿಗೆ ಕಬ್ಬಿಣ ತುಂಬಿಕೊಂಡು ತೆರಳುತ್ತಿದ್ದ 12 ಚಕ್ರದ ಲಾರಿ ಭಾರಿ ವಾಹನಗಳ ನಿಷೇದವಿದ್ದರೂ ಘಾಟ್ ನಲ್ಲಿ ಸಂಚಾರ ಮಾಡುತ್ತಿದ್ದಾಗ ಚೆಕ್ ಪೋಸ್ಟ್ ಸಿಬ್ಬಂದಿಗಳು ನಿಲ್ಲಿಸಲು ಸೂಚನೆ ನೀಡಿದರೂ ಚಾಲಕ ಲಾರಿಯನ್ನು ನಿಲ್ಲಿಸದೇ ಚಲಾಯಿಸಿದ್ದ. ತಕ್ಷಣ ವಿಷಯ ತಿಳಿದ ಬಣಕಲ್ ಸಬ್ ಇನ್ಸ್ಪೆಕ್ಟರ್ ಲಾರಿ ಚಾಲಕನನ್ನು ತಡೆದು ದಂಡ ವಿಧಿಸಿ ಟ್ರಾಫಿಕ್ ಕ್ಲಿಯರ್ ಮಾಡಿದರು.
ಸುಮಾರು ಎರಡು ಗಂಟೆಗಳಿಂದ ಲಾರಿ ತಿರುಗಿಸಲು ಆಗದೆ ಪರದಾಡುವ ಪರಿಸ್ಥಿತಿ ಉಂಟಾಯಿತು.
























