ವೀರಮಂಗಲ ಮಾದರಿ ಶಾಲೆ
ಒಂದು ಶಾಲೆ ಹೇಗಿದೆ ಎಂದು ಆ ಊರನ್ನು ನೋಡಿ ತಿಳಿದುಕೊಳ್ಳಬಹುದು. ವೀರಮಂಗಲ ಶಾಲೆಯ ಅಭಿವೃದ್ಧಿ ನೋಡಿದಾಗ, ಊರಿನ ಜನರ ಹೃದಯ ಶ್ರೀಮಂತಿಕೆಯನ್ನು ಅರಿತುಕೊಳ್ಳಬಹುದು. ಶಾಸಕನಾಗಿ ನಾನು ಅನುದಾನ ನೀಡಿರಬಹುದು. ಅದರ ಜೊತೆಗೆ ಊರಿನ ಜನರ ಕೊಡುಗೆಯೂ ಇದೆ.
- ಸಂಜೀವ ಮಠಂದೂರು, ಶಾಸಕ
ಪುತ್ತೂರು: ಶಾಸಕ ಸಂಜೀವ ಮಠಂದೂರು ಅವರು ನೀಡಿರುವ ಅನುದಾನಗಳನ್ನು ಬಳಸಿಕೊಂಡು ಬಹಳಷ್ಟು ಅಭಿವೃದ್ಧಿ ಕಾರ್ಯಗಳು ಶಾಲೆಯಲ್ಲಿ ಆಗಿದೆ ಎಂದು ನರಿಮೊಗರು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾ ಹೇಳಿದರು.
ವೀರಮಂಗಲ ಹಿ.ಪ್ರಾ. ಶಾಲೆಯಲ್ಲಿ ಶಾಸಕ ಸಂಜೀವ ಮಠಂದೂರು ಅವರ ಅನುದಾನದಿಂದ ಬಿಡುಗಡೆಯಾದ ಸ್ಮಾರ್ಟ್ ಕ್ಲಾಸ್ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಶಾಸಕರ ಅನುದಾನ ಬಳಸಿಕೊಂಡು ಶುದ್ಧ ಕುಡಿಯುವ ನೀರಿನ ಜೊತೆಗೆ ಆಧುನಿಕ ಶಿಕ್ಷಣ ಪದ್ಧತಿಗೆ ಬಹಳ ಅಗತ್ಯವಾಗಿರುವ ಸ್ಮಾರ್ಟ್ ಕ್ಲಾಸ್ ಗಳನ್ನು ಶಾಸಕರು ನೀಡಿರುವುದಕ್ಕೆ ದನ್ಯವಾದ ಎಂದರು.
ಮುಖ್ಯಗುರು ತಾರಾನಾಥ್ ಪಿ. ಮಾತನಾಡಿ. ಜನರು, ಶಿಕ್ಷಕರು ಉತ್ತಮ ಸಂಪರ್ಕದಲ್ಲಿದ್ದಾಗ ಶಾಲೆ ಬೆಳೆಯುತ್ತದೆ ಎನ್ನುವುದಕ್ಕೆ ವೀರಮಂಗಲ ಶಾಲೆ ಸಾಕ್ಷಿ. ಇದಕ್ಕೆ ಪೂರಕವಾಗಿ ಶಾಸಕ ಸಂಜೀವ ಮಠಂದೂರು ಅವರು ಸಾಕಷ್ಟು ಅನುದಾನ ನೀಡಿ, ಶಾಲೆಯ ಅಭಿವೃದ್ಧಿಗೆ ಕಾರಣರಾಗಿದ್ದಾರೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್, ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ಉಮಾನಾಥ ಪಿ.ಬಿ., ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಶಿವರಾಮ್ ಭಟ್, ವೀರಮಂಗಲ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ರಾಝಕ್ ವಿ.ಎಸ್, ಎಸ್.ಡಿ.ಎಂ.ಸಿ. ಅಧ್ಯಕ್ಷೆ ಅನುಪಮಾ, ಆನಂದ ಗೌಡ ಗುತ್ತು ಉಪಸ್ಥಿತರಿದ್ದರು.
























