ಅಜ್ಜಿಕಲ್ಲು ಶಾಲೆಯಲ್ಲಿ ಶಾಸಕರ ಹಾಗೂ ಎಂ.ಆರ್.ಪಿ.ಎಲ್ ಕೊಡುಗೆಗಳ ಅನಾವರಣ

ಪುತ್ತೂರು: ಅಜ್ಜಿಕಲ್ಲು ಏಕತಡ್ಕ ಹಿ.ಪ್ರಾ. ಶಾಲೆಯಲ್ಲಿ ಝೇಂಕಾರ ಮಕ್ಕಳ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮದಲ್ಲಿ ಶಾಸಕರ ಅನುದಾನದಿಂದ ನೀಡಿದ ಕೊಡುಗೆ ಹಾಗೂ ಎಂ.ಆರ್.ಪಿ.ಎಲ್.ನ ಕೊಡುಗೆಗಳನ್ನು ಅನಾವರಣ ಮಾಡಲಾಯಿತು.

ಸ್ಮಾರ್ಟ್ ಕ್ಲಾಸ್ ಹಾಗೂ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಸಂಜೀವ ಮಠಂದೂರು, ಸಮಾಜ ಹಾಗೂ ಸರಕಾರ ಪರಸ್ಪರ ಕೈ ಜೋಡಿಸಿದಾಗ ಇಂತಹ ಸಂಭ್ರಮ ಮೂಡಿಬರಲು ಸಾಧ್ಯ. ಮಕ್ಕಳನ್ನು ಪೋಷಿಸುವ ಕೆಲಸವನ್ನು ಸರಕಾರ ಮಾಡುತ್ತಿದೆ. ಸರಕಾರದ ಯೋಜನೆಗಳನ್ನು ಸದ್ಭಳಕೆ ಮಾಡಿಕೊಳ್ಳುವ ಕೆಲಸ ಪೋಷಕರಿಂದ ಆಗಬೇಕು ಎಂದರು.

ಎಂ.ಆರ್.ಪಿ.ಎಲ್.ನಿಂದ ಕೊಡುಗೆಯಾಗಿ ನೀಡಿದ ಶೌಚಾಲಯ ಕಟ್ಟಡವನ್ನು ಇದೇ ಸಂದರ್ಭ ಉದ್ಘಾಟಿಸಲಾಯಿತು. ಒಳಮೊಗ್ರು ಗ್ರಾ.ಪಂ. ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಒಳಮೊಗ್ರು ಗ್ರಾಮ ಪಂಚಾಯತ್ ಸದಸ್ಯರಾದ ಮಹೇಶ್ ಕೇರಿ, ವನಿತಾ ಯಡ್ಕತ್ತೋಡಿ, ನಿತೀಶ್ ಕುಮಾರ್ ಶಾಂತಿವನ, ಹರೀಶ್ ಬಿಜತ್ರೆ, ಕುಂಬ್ರ ಸಮೂಹ ಸಂಪನ್ಮೂಲ ವ್ಯಕ್ತಿ ಶಶಿಕಲಾ ಬಿ, ಎಮ್.ಆರ್. ಪಿ. ಎಲ್. ಮಂಗಳೂರು ಜಿಜಿ ಎಂ. ಸತೀಶ್, ಸಂತೋಷ್ ಕುಮಾರ್, ಕಾರ್ಯದರ್ಶಿ ಸುಶಾಂತ್ ಅಜ್ಜಿಕಲ್ಲು,  ಅಜಿತ್ ಹೊಸಮನೆ ಉಪಸ್ಥಿತರಿದ್ದರು.





















































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top