ಹೊಸ ವರ್ಷಾಚರಣೆ ವೇಳೆ ಯುವತಿಗೆ ಕಿರುಕುಳ

ಜನರ ಗುಂಪು ಚದುರಿಸಲು ಪೊಲೀಸರಿಂದ ಲಾಠಿಚಾರ್ಜ್‌

ಬೆಂಗಳೂರು: ಹೊಸ ವರ್ಷಾಚರಣೆ ಸಂಭ್ರಮದ ವೇಳೆ ಕೆಲವು ಕಿಡಿಗೇಡಿಗಳು ಯುವತಿಗೆ ಕಿರುಕುಳ ನೀಡಿರುವ ಘಟನೆಗಳು ನಡೆದಿದ್ದು, ಕೋರಮಂಗಲದಲ್ಲಿ ಗುಂಪನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ.
ಚರ್ಚ್ ಸ್ಟ್ರೀಟ್‌ನಲ್ಲಿ ಪ್ರಿಯಕರನೊಂದಿಗೆ ಬಂದಿದ್ದ ಯುವತಿಯೊಬ್ಬಳಿಗೆ ಕಿಡಿಕೇಡಿಗಳು ಕಿರುಕುಳ ನೀಡಿದ್ದಾರೆ. ಈ ವೇಳೆ ಆಕೆಯ ಗೆಳೆಯ ದುಷ್ಕರ್ಮಿಗಳೊಂದಿಗೆ ಜಗಳಕ್ಕಿಳಿದಿದ್ದು, ಕೈಕೈ ಮಿಲಾಯಿಸಿದ್ದಾರೆ. ಆದರೆ, ಪೊಲೀಸರು ಬರುವಷ್ಟರದಲ್ಲಿ ಕಿಡಿಗೇಡಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಹೊಸ ವರ್ಷಾಚರಣೆ ಸಂಭ್ರಮದ ವೇಳೆ ಪಬ್ ಗಳಲ್ಲಿ ಭಾರಿ ಪ್ರಮಾಣದಲ್ಲಿ ಜನ ಸೇರಿದ್ದರು.ಕೋರಮಂಗಲದಲ್ಲಿ ಪಬ್‌ಗಳ ಒಳಗೆ ಜನರು ಕುಣಿಯುವುದನ್ನು ನೋಡಲು ಪಬ್‌ಗಳ ಹೊರಗೆ ಸಾಕಷ್ಟು ಜನರು ನಿಂತಿದ್ದರು. ಈ ಜನಸಂದಣಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.
ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ನಲ್ಲಿ ಭಾರಿ ಪೊಲೀಸರು ಭಾರೀ ಪ್ರಮಾಣದ ಬಿಗಿ ಬಂದೋಬಸ್ತ್ ನಿಯೋಜನೆಗೊಳಿಸಿದ್ದರು.
ಮಹಿಳೆಯರ ಸುರಕ್ಷತೆಗಾಗಿ ಸಿಬಿಡಿ ಪ್ರದೇಶಗಳಲ್ಲಿ ಮತ್ತು ನಗರದಾದ್ಯಂತ 37 ಮಹಿಳಾ ಸುರಕ್ಷತಾ ವಲಯಗಳನ್ನು ರಚಿಸಿದ್ದರು. ಪ್ರತಿ 100 ಮೀಟರ್‌ಗೆ ವಾಚ್ ಟವರ್‌ಗಳನ್ನು ಹಾಕಲಾಗಿತ್ತು.
ಚರ್ಚ್ ಸ್ಟ್ರೀಟ್ ಮತ್ತು ಇತರೆ ರಸ್ತೆಗಳಲ್ಲಿ ಬಿಬಿಎಂಪಿ ಮಾರ್ಷಲ್‌ಗಳು ಮಾಸ್ಕ್ ಧರಿಸುವಂತೆ ಜನರಿಗೆ ಸಲಹೆ ನೀಡುತ್ತಿರುವುದು ಕಂಡುಬಂದಿತು. ಡ್ರಗ್ಸ್ ದಂಧೆ ಮೇಲೆ ಪೊಲೀಸರು ನಿಗಾ ಇಟ್ಟಿದ್ದರು.
ಬೆಂಗಳೂರಿನ ಬ್ರೆಗೇಡ್​​ ರೋಡ್​, ಚರ್ಚ್​ ಸ್ಟ್ರೀಟ್‌ನಲ್ಲಿ ಜನರು ಕುಣಿದು ಕುಪ್ಪಳಿಸಿ ಹೊಸ ವರ್ಷವನ್ನು ಬರ ಮಾಡಿಕೊಂಡಿದ್ದಾರೆ. ಆದ್ರೆ ಹೊಸ ವರ್ಷದ ಸಂಭ್ರಮದಲ್ಲಿದ್ದ ಕೆಲ ಮದ್ಯಪ್ರಿಯರು ಕಂಠಪೂರ್ತಿ ಕುಡಿದು ಫುಲ್ ಟೈಟಾಗಿದ್ದು ಯುವತಿ-ಯುವಕರು ಎಲ್ಲೆಂದರಲ್ಲಿ ತೂರಾಡುತ್ತಿದ್ದ ದೃಶ್ಯಗಳು ಕಂಡು ಬಂದಿವೆ. ಅತಿಯಾಗಿ ಕುಡಿದಿದ್ದ ಗೆಳೆಯರನ್ನ ಯುವಕರು ಕರೆದುಕೊಂಡು ಹೋಗುತ್ತಿದ್ದರು. ​ಬ್ರಿಗೇಡ್ ರಸ್ತೆಯ ಎರಡು ಬದಿ ಬ್ಯಾರಿಕೇಡ್ ಹಾಕಿ ಸಂಚಾರ ನಿರ್ಬಂಧ ಹೇರಲಾಗಿತ್ತು. ರಸ್ತೆಯುದ್ದಕ್ಕೂ ನೆರೆದಿದ್ದ ಜನರನ್ನ ಹೊರ ಕಳುಹಿಸಲು ಪೊಲೀಸರು ಹರ ಸಾಹಸ ಪಡಬೇಕಾಯಿತು. ಮೈಕ್ ಮೂಲಕ ಅನೌನ್ಸ್ ಮಾಡುತ್ತಾ ಜನರನ್ನ ಮನವಿ ಮಾಡಿ ಪೊಲೀಸರು ಹೊರ ಕಳುಹಿಸುತ್ತಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top