ಐಪಿಎಲ್‌ ಸಮಯ ಬದಲಾವಣೆಗೆ ಬಿಸಿಸಿಐ ಚಿಂತನೆ

ಸೆಪ್ಟೆಂಬರ್‌-ಅಕ್ಟೋಬರ್‌ ತಿಂಗಳಲ್ಲಿ ನಡೆಸಲು ಒಲವು

ನವದೆಹಲಿ: ಐಪಿಎಲ್‌ ಪಂದ್ಯಗಳನ್ನು ಮಾರ್ಚ್‌-ಮೇ ತಿಂಗಳ ಬದಲಾಗಿ ಸೆಪ್ಟೆಂಬರ್‌-ಅಕ್ಟೋಬರ್‌ ತಿಂಗಳಲ್ಲಿ ನಡೆಸುವ ಬಗ್ಗೆ ಬಿಸಿಸಿಐ ಚಿಂತನೆ ನಡೆಸುತ್ತಿದೆ.
ಈ ಕುರಿತು ಐಪಿಎಲ್‌ ಮುಖ್ಯಸ್ಥ ಅರುಣ್‌ ಧುಮಾಲ್‌ ಸಂದರ್ಶನವೊಂದರಲ್ಲಿ ಮಾತನಾಡಿ, ಐಪಿಎಲ್‌ ಆವೃತ್ತಿಯ ಸಮಯ ಬದಲಾವಣೆ ಬಗ್ಗೆ ನಾವು ಪ್ರಸಾರಕರ ಜೊತೆ ಚರ್ಚಿಸಬೇಕು. ಸೆಪ್ಟೆಂಬರ್‌-ಅಕ್ಟೋಬರ್‌ ತಿಂಗಳು ದೀಪಾವಳಿ ಮತ್ತು ದಸರಾ ಹಬ್ಬದ ಸಮಯವಾಗಿರುವುದರಿಂದ ಜಾಹೀರಾತುದಾರರು ಹಾಗೂ ವ್ಯವಹಾರ ದೃಷ್ಟಿಯಿಂದ ಅತ್ಯಂತ ಲಾಭದಾಯಕ ಹಾಗೂ ಸೂಕ್ತವಾದ ಸಮಯವಾಗಿದೆ. ಹೀಗಾಗಿ ಮಾರ್ಚ್‌-ಮೇ ತಿಂಗಳಿಗಿಂತ ಈ ಸಮಯ ಉತ್ತಮವಾಗಿರುತ್ತದೆ ಎನ್ನಲಾಗಿದೆ ಎಂದಿದ್ದಾರೆ.

ಮೇ ತಿಂಗಳಲ್ಲಿ ಬಿಸಿಲು ಜಾಸ್ತಿ ಇರುವುದರಿಂದ ಆಟಗಾರರ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಫೆಬ್ರವರಿ-ಏಪ್ರಿಲ್‌ ತಿಂಗಳನ್ನೂ ಪರಿಗಣಿಸಬಹುದು. ಆದರೆ ಈ ಸಮಯದಲ್ಲಿ ಐಪಿಎಲ್‌ ನಡೆಸುವುದರಿಂದ ಜಾಗತಿಕ ಮಟ್ಟದ ಎಲ್ಲ ಕ್ರಿಕೆಟ್‌ ಟೂರ್ನಿ, ಸರಣಿ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಈ ಬಗ್ಗೆ ಚರ್ಚೆ ನಡೆಸಬೇಕಾಗಿದೆ ಎಂದು ತಿಳಿಸಿದ್ದಾರೆ.





















































 
 
error: Content is protected !!
Scroll to Top