ತುಮಕೂರು: ಬಕ್ರೀದ್ ಹಿನ್ನೆಲೆ ವಧಿಸಲು ಶೆಡ್ ಒಂದರಲ್ಲಿ ಕೂಡಿ ಹಾಕಲಾಗಿದ್ದ ಸುಮಾರು 80 ಕ್ಕೂ ಅಧಿಕ ಹಸುಗಳನ್ನು ತುಮಕೂರು ಜಿಲ್ಲಾ ಪೊಲೀಸರು ರಕ್ಷಣೆ ಮಾಡಿದ ಘಟನೆ ರಾಜೀವ ಗಾಂಧಿ ನಗರದಲ್ಲಿ ನಡೆದಿದೆ.
ಹಸುಗಳನ್ನು ಕೂಡಿ ಹಾಕಲಾಗಿದೆ ಎನ್ನುವ ಖಚಿತ ಮಾಹಿತಿಯ ಮೇರೆಗೆ ತುಮಕೂರು ವಿಭಾಗದ 60 ಕ್ಕೂ ಅಧಿಕ ಪೊಲೀಸರು ಶೆಡ್ಗೆ ದಾಳಿ ನಡೆಸಿದ್ದು, 80 ಕ್ಕೂ ಹೆಚ್ಚು ಹಸುಗಳನ್ನು ರಕಿಷೊಮೆ ಮಾಡಿ ಗುಬ್ಬಿ ತಾಲೂಕಿನ ಗೋ ಶಾಲೆಗೆ ರವಾನೆ ಮಾಡಿದ್ದಾರೆ.
ಮಹಮ್ಮದ್ ಇಕ್ಬಾಲ್ ಅನ್ಸಾರಿ ಎಂಬಾತನ ಖಾಸಗಿ ಜಾಗದಲ್ಲಿ ಗೋವುಗಳನ್ನು ಕಟ್ಟಿ ಹಾಕಲಾಗಿತ್ತು. ಅವುಗಳನ್ನು ಬಕ್ರೀದ್ಗೆ ಬಳಸಲು ಮುಂದಾಗಿದ್ದರು ಎಂದು ತಿಳಿದು ಬಂದಿದೆ. ವಶಕ್ಕೆ ಪಡೆದ ಗೋವುಗಳ ಮೌಲ್ಯ ಸುಮಾರು ಇಪ್ಪತ್ತು ಲಕ್ಷಕ್ಕೂ ಅಧಿಕ ಎಂದು ತಿಳಿದು ಬಂದಿದೆ.
























