ಸ್ನಾಪ್ಚಾಟ್ ಪರಿಚಯದಲ್ಲಿ ಮದುವೆ: ಎರಡೇ ತಿಂಗಳಿಗೆ ಗಂಡನಿಗೆ ಬೇಡವಾದಳು ಹೆಂಡತಿ

ಬೆಂಗಳೂರು: ಸ್ನಾಪ್ಚಾಟ್‌ನಲ್ಲಿ ಆದ ಪರಿಚಯ ಪ್ರೀತಿಗೆ ತಿರುಗಿ ಒಂದು ವರ್ಷದ ಬಳಿಕ ಮದುವೆಯಾಗಿದ್ದ ಜೋಡಿಯ ಸಂಸಾರ ಸೂತ್ರ ಕಳೆದುಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಮದುವೆಯಾದ ಎರಡೇ ತಿಂಗಳಿಗೆ ಪತಿ ಚೇತನ್ ಪತ್ನಿ ಬೇಡ ಎಂದು ತಿರಸ್ಕರಿಸಿದ್ದಾನೆ. ಸಂತ್ರಸ್ತ ಪತ್ನಿ ತನಗೆ ಗಂಡ ಬೇಕು ಎಂದು ಪೊಲೀಸ್ ಠಾಣೆಯ ಮೆಟ್ಟಿಲೇರುವಂತಾಗಿದೆ.





















































ಚೇತನ್ ಮತ್ತು ನರ್ಸಿಂಗ್ ಕೆಲಸ ಮಾಡುತ್ತಿದ್ದ ಮಹಿಳೆ ನಡುವೆ ಸ್ನಾಪ್ಚಾಟ್‌ನಲ್ಲಿ ಪರಿಚಯವಾಗಿ, ಪ್ರೇಮವಾಗಿ ಬಳಿಕ ಮದುವೆಯೂ ಆಗಿದ್ದರು. ಮಹಿಳೆಗೆ ತಂದೆ -ತಾಯಿ ಇಬ್ಬರೂ ಇಲ್ಲ. ಆಕೆ ತನ್ನ ತಂದೆ ತಾಯಿಗೆ ಗೌರವ ನೀಡುತ್ತಿಲ್ಲ ಎನ್ನುವ ಕಾರಣಕ್ಕೆ ಜಗಳವಾಗಿದ್ದು, ‌ಚೇತನ್ ಎರಡೇ ತಿಂಗಳಿಗೆ ಆಕೆಯನ್ನು ಬೇಡ ಎಂದಿದ್ದಾನೆ.

 
 

ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.

error: Content is protected !!
Scroll to Top