ಬೈಕ್‌ಗಳು ಮುಖಾಮುಖಿ ಡಿಕ್ಕಿ : ಓರ್ವ ಮೃತ್ಯು, ಇಬ್ಬರಿಗೆ ಗಾಯ

ಸುಳ್ಯ: ಎರಡು ಬೈಕ್‍ಗಳ ನಡುವೆ ಅಪಘಾತ ಸಂಭವಿಸಿ ಓರ್ವ ಸವಾರ ಮೃತಪಟ್ಟು, ಇನ್ನಿಬ್ಬರು ಸವಾರರು ಗಂಭೀರ ಗಾಯಗೊಂಡ ಘಟನೆ ಪೆರಾಜೆಯಲ್ಲಿ ಭಾನುವಾರ ನಡೆದಿದೆ.

ಕೇರಳದ ಪಯ್ಯನೂರಿನ ಕಾಂಟ್ರಾಕ್ಟರ್ ಮುಂದಾಥನ್ ಪ್ರದೀಪನ್ (52) ಬೈಕ್ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿ. ಸುಳ್ಯದಿಂದ ಸಂಪಾಜೆ ಕಡೆಗೆ ಹೋಗುತ್ತಿದ್ದ ಪ್ರದೀಪನ್ ಅವರ ಬೈಕ್ ಮತ್ತು ಕಲ್ಲುಗುಂಡಿ ಕಡೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಸುಮಂತ್ ಮತ್ತು ರವಿಕುಮಾರ್ ಬರುತ್ತಿದ್ದ ಬೈಕ್‍ಗಳ ಮಧ್ಯೆ ಅಪಘಾತ ಸಂಭವಿಸಿ ದುರ್ಘಟನೆ ನಡೆದಿದೆ.

ಇನ್ನೊಂದು ಬೈಕಿನಲ್ಲಿದ್ದ ಕಲ್ಲುಗುಂಡಿಯ ಸುಮಂತ್ ಮತ್ತು ಚೆಡಾವಿನ ರವಿಕುಮಾರ್ ಎಂಬವರು ಗಂಭೀರ ಗಾಯಗೊಂಡಿದ್ದು, ಇದರಲ್ಲಿ ರವಿಕುಮಾರ್ ಸ್ಥಿತಿ ಚಿಂತಾಜನಕವಾಗಿದೆ. ಮೃತಪಟ್ಟ ಪ್ರದೀಪನ್ ಮೂಲತಃ ಕೇರಳ ಕಣ್ಣೂರಿನ ಪಯ್ಯನೂರಿನ ವ್ಯಕ್ತಿ. ಖಾಸಗಿ ಬಿಲ್ಡಿಂಗ್ ಕನಸ್ಟ್ರಕ್ಷನ್ ಅಸೋಸಿಯೇಷನ್ ಕೇರಳ ರಾಜ್ಯ ಸಮಿತಿಯ ಸದಸ್ಯರಾಗಿರುವ ಅವರು ಕೆಲಸದ ನಿಮಿತ್ತ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿ ಕೇಸು ದಾಖಲಿಸಿಕೊಂಡಿದ್ದಾರೆ.





















































 
 
error: Content is protected !!
Scroll to Top