ಡಾಕ್ಟರ್ ಮನೆಯಲ್ಲಿ ನಗದು ಕದ್ದ ‌ಕಳ್ಳ ಪೊಲೀಸರ ಬಲೆಗೆ

ಪುತ್ತೂರು: ಡಾಕ್ಟರ್ ಒಬ್ಬರ ಮನೆಯಿಂದ ಕಳ್ಳತನ ಮಾಡಿದ್ದ ಆರೋಪಿಯನ್ನು ಪುತ್ತೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಧಿತನನ್ನು ಬಪ್ಪಳಿಗೆಯ ಸಿಂಗಾಣಿ ನಿವಾಸಿ ಸುರೇಶ್(47) ಎಂದು ಗುರುತಿಸಲಾಗಿದೆ.

ಸುರೇಶ್ ಉರ್ಲಾಂಡಿಯ ಸುಶ್ರುತ ಆಸ್ಪತ್ರೆಯ ಸಮೀಪದ ಡಾ. ವೆಂಕಟ್ರಮಣ ಭಟ್ ಅವರ ಮನೆಯ ಹೆಂಚು ಜಾರಿಸಿ, ಮನೆಯೊಳಗೆ ನುಗ್ಗಿ ನಗದು ಕಳ್ಳತನ ಮಾಡಿದ್ದ. ಈ ಪ್ರಕರಣಕ್ಕೆ ‌ಸಂಬಂಧಿಸಿದ ಹಾಗೆ ಆತನನ್ನು ಬಂಧಿಸಿರುವುದಾಗಿದೆ.





















































 
 

ಸಿಸಿ ಕೆಮರಾ ಪರಿಶೀಲನೆ ನಡೆಸಿದ ಪೊಲೀಸರು ಆರೋಪಿಯ ಸುಳಿವು ಪತ್ತೆ ಮಾಡಿ, ಆತನನ್ನು ಬಂಧಿಸಿರುವುದಾಗಿದೆ.

error: Content is protected !!
Scroll to Top