ಹಳೆ ದ್ವೇಷದಿಂದ ಕೃಷಿಕನಿಗೆ ಹಲ್ಲೆ: ದೂರು ದಾಖಲು

ಕಡಬ: ಹಳೇ ದ್ವೇಷ ಮತ್ತು ಮನೆಯ ಹೆಂಚು ತೆಗೆಯುವ ವಿಷಯಕ್ಕೆ ಸಂಬಂಧಿಸಿದ ಹಾಗೆ ವ್ಯಕ್ತಿಯೊಬ್ಬರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿ, ಜೀವ ಹೆದರಿಕೆ ಒಡ್ಡಿರುವ ಘಟನೆ ಕುಟ್ರುಪ್ಪಾಡಿಯ ಉಳಿಪುವಿನಲ್ಲಿ ನಡೆದಿದೆ.

ಘಟನೆಗೆ ಸಂಬಂಧಿಸಿದ ಹಾಗೆ ಇಬ್ಬರು ಆರೋಪಿಗಳ ವಿರುದ್ದ ಕಡು ಪೊಲೀಸರು ಕೇಸು ದಾಖಲು ಮಾಡಿದ್ದಾರೆ.

ಕೃಷಿಕ ಶೇಖರ ಗೌಡ (45) ಎಂಬವರೇ ಹಲ್ಲೆಗೆ ಒಳಗಾದವರು‌. ಗಾಯಗೊಂಡಿರುವ ಶೇಖರ ಅವರನ್ನು ಕಂಬದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.





















































 
 

ಆರೋಪಿಗಳಾದ ಸುನೀಲ್ ಮತ್ತು ಬೇಬಿ ವಿರುದ್ಧ ಪ್ರಕರಣ ದಾಖಲಾಗಿದೆ.

error: Content is protected !!
Scroll to Top