ನದಿ, ಸಮುದ್ರ, ಜಲಪಾತಗಳಿಗೆ ವಿದ್ಯಾರ್ಥಿಗಳ ಪ್ರವಾಸ ನಿಷೇಧ!

ಪದವಿ ಕಾಲೇಜುಗಳ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸಕ್ಕೆ ಹೊಸ ಮಾರ್ಗಸೂಚಿ

ಬೆಂಗಳೂರು: ಇನ್ನು ಮುಂದೆ ಯಾವುದೇ ಶೈಕ್ಷಣಿಕ ಪ್ರವಾಸಕ್ಕೂ ಶಿಕ್ಷಣ ಇಲಾಖೆಯ ಪೂರ್ವಾನುಮತಿ ಕಡ್ಡಾಯ. ಒಂದು ದಿನದ ಸ್ಥಳೀಯ ಪ್ರವಾಸವಾಗಲಿ, ನಾಲ್ಕೈದು ದಿನಗಳ ದೂರದ ಪ್ರವಾಸವಾಗಲಿ, ಅನುಮತಿ ಪಡೆಯದೆ ಪ್ರವಾಸಕ್ಕೆ ತೆರಳಲು ಅವಕಾಶ ಇರುವುದಿಲ್ಲ. ಪ್ರವಾಸ ಆರಂಭಿಸುವ ಮೊದಲು ಸಮೀಪದ ಪೊಲೀಸ್ ಠಾಣೆಗೆ ಸಂಪೂರ್ಣ ಮಾಹಿತಿ ನೀಡಬೇಕು ಎಂಬ ಸೂಚನೆಯನ್ನು ಶಿಕ್ಷಣ ಇಲಾಖೆ ರಾಜ್ಯದ ಎಲ್ಲ ಪದವಿ ಕಾಲೇಜುಗಳಿಗೆ ನೀಡಿದೆ.

ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳ ಶೈಕ್ಷಣಿಕ ಪ್ರವಾಸಗಳಿಗೆ ಇದೀಗ ಕಟ್ಟುನಿಟ್ಟಿನ ನಿಯಮಗಳು ಜಾರಿಯಾಗಿವೆ. ಇತ್ತೀಚೆಗೆ ವಿದ್ಯಾರ್ಥಿಗಳ ಪ್ರವಾಸ ಬಸ್ ಅಪಘಾತವಾದ ಹಿನ್ನೆಲೆ, ಕಾಲೇಜು ಶಿಕ್ಷಣ ಇಲಾಖೆ ಸುರಕ್ಷತೆಗೆ ಆದ್ಯತೆ ನೀಡಿ ಹೊಸ ಮಾರ್ಗಸೂಚಿ ಹೊರಡಿಸಿದೆ. ಇತ್ತೀಚಿನ ಕೆಲವು ಅವಘಡಗಳು ಕಾಲೇಜು ಪ್ರವಾಸಗಳ ಸುರಕ್ಷತೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದ್ದವು. ಇದೇ ಕಾರಣದಿಂದಾಗಿ ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳ ಪ್ರವಾಸಗಳಿಗೆ ಕಾಲೇಜು ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಮಾರ್ಗಸೂಚಿ ಜಾರಿಗೊಳಿಸಿದೆ.





















































 
 

ವಿದ್ಯಾರ್ಥಿಗಳ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಿರುವ ಇಲಾಖೆ, ನದಿ, ಸಮುದ್ರ, ಜಲಪಾತ, ದಟ್ಟ ಅರಣ್ಯ ಹಾಗೂ ಕಡಿದಾದ ಬೆಟ್ಟ ಪ್ರದೇಶಗಳಂತಹ ಅಪಾಯಕಾರಿ ತಾಣಗಳಿಗೆ ವಿದ್ಯಾರ್ಥಿಗಳನ್ನು ಕರೆದೊಯ್ಯುವುದನ್ನು ನಿಷೇಧಿಸಿದೆ. ಅಪಾಯಕಾರಿ ಸೆಲ್ಫಿ, ಸಾಹಸ ಚಟುವಟಿಕೆಗಳು, ಸಾಮಾಜಿಕ ಜಾಲತಾಣಗಳಿಗಾಗಿ ರೀಲ್ಸ್ ಮಾಡುವುದಕ್ಕೂ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ. ಪೊಲೀಸ್ ಠಾಣೆಗೆ ಮಾಹಿತಿ ಕಡ್ಡಾಯ, ಅಪಾಯಕಾರಿ ಸ್ಥಳಗಳಿಗೆ ನಿಷೇಧ, ಪೋಷಕರ ಮುಚ್ಚಳಿಕೆ ಪತ್ರ ಕಡ್ಡಾಯ, ಕನಿಷ್ಠ ಒಬ್ಬ ಕಾಯಂ ಉಪನ್ಯಾಸಕ ಕಡ್ಡಾಯ, ಪ್ರವಾಸದ ವೇಳೆ ವಿದ್ಯಾರ್ಥಿಗಳು ಗುಂಪಿನಿಂದ ದೂರ ಹೋಗಬಾರದು. ಸ್ಥಳೀಯ ಸೂಚನಾ ಫಲಕಗಳು ಹಾಗೂ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಇಲಾಖೆ ತಿಳಿಸಿದೆ.

error: Content is protected !!
Scroll to Top