ವಿಜಯಪುರ: ಮನೆಯ ಮೇಲ್ಛಾವಣಿ ಕುಸಿದು ಬಿದ್ದ ಪರಿಣಾಮ ಮಹಿಳೆಯೊಬ್ಬರು ಜೀವಂತ ಸಮಾಧಿಯಾದ ಘಟನೆ ನಿಡಗುಂದಿಯಲ್ಲಿ ನಡೆದಿದೆ.
ಮಹಾದೇವಿ ವಾರದ (55) ಎಂಬವರೇ ಮೃತ ದುರ್ದೈವಿ. ಪಟ್ಟಣದ ಗೌರೀಶ್ವರ ದೇಗುಲದ ಸಮೀಪ ಈ ದುರ್ಘಟನೆ ನಡೆದಿರುವುದಾಗಿದೆ.
ಮೊನ್ನೆ ಸುರಿದ ಮಳೆಗೆ ಹಳೆಯ ಮನೆಯ ಮೇಲ್ಛಾವಣಿ ಕುಸಿದಿದೆ. ನಸುಕಿನ ಜಾವ ಈ ಘಟನೆ ನಡೆದಿದ್ದು, ಮಹಾದೇವಿ ಅವರ ಮೇಲೆ ಬಿದ್ದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅವರ ಪತಿ ಶಿವಾನಂದ ಅವರು ಮನೆಯ ಹೊರ ಭಾಗದಲ್ಲಿ ಮಲ ಆಗಿದ್ದು, ಇದರಿಂದಾಗಿ ಅವರಿಗೆ ಯಾವುದೇ ಅಪಾಯ ಸಂಭವಿಸಿಲ್ಲ.
ನಿಡಗುಂದಿ ಪೊಲೀಸರು ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
























