ಜೂ.30ರಿಂದ ಕರ್ನಾಟಕದಲ್ಲಿ ಎಸ್‌ಐಆರ್‌ ಶುರು

ಮನೆ ಮನೆಗೆ ಭೇಟಿ ನೀಡಿ ಪರಿಷ್ಕರಣೆ ಕಾರ್ಯ

ಬೆಂಗಳೂರು: ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದಿನಾಂಕ ಘೋಷಣೆ ಆಗಿದೆ. ಜೂನ್ 20ರಿಂದ ತರಬೇತಿ ಮತ್ತು ಮುದ್ರಣ ಕಾರ್ಯ ಶುರುವಾಗುತ್ತದೆ. ಜೂ.30ರಿಂದ ಜು.29ರ ವರೆಗೆ ಮನೆ ಮನೆಗೆ ಭೇಟಿ ನೀಡಿ ಪರಿಷ್ಕರಣೆ ನಡೆಸಲಾಗುತ್ತದೆ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತರಾದ ಅನ್ಬುಕುಮಾರ್ ತಿಳಿಸಿದರು.

ಈಗಾಗಲೇ ಎಸ್‌ಐಆರ್ ಗಾಗಿ ಮ್ಯಾಪಿಂಗ್‌ ಕಾರ್ಯ ಮಾಡಲಾಗಿದೆ. ಎಸ್‌ಐಆರ್‌ಗೆ ಈಗಾಗಲೇ ಚುನಾವಣಾ ಆಯೋಗ ದಿನಾಂಕ ಘೋಷಿಸಿದೆ. ಜೂನ್ 20ರಿಂದ ತರಬೇತಿ ಮತ್ತು ಮುದ್ರಣ ಕಾರ್ಯ ಶುರುವಾಗುತ್ತದೆ. ಜೂ.30ರಿಂದ ಜು.29ರ ವರೆಗೆ ಮನೆ ಮನೆಗೆ ಭೇಟಿ ನೀಡಿ ಪರಿಷ್ಕರಣೆ ಮಾಡಲಾಗುವುದು. ಮತದಾರರ ಪಟ್ಟಿಯಲ್ಲಿ ಸೇರಲು 18 ವರ್ಷ ಪೂರ್ಣವಾಗಿರಬೇಕು. ಅಕ್ಟೋಬರ್ 7ರಂದು ಮತದಾರರ ಅಂತಿಮ ಪಟ್ಟಿ ಪ್ರಕಟಿಸುವುದಾಗಿ ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಮಾಹಿತಿ ನೀಡಿದರು.





















































 
 

5.55 ಕೋಟಿ ಮತದಾರರನ್ನು ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಗೆ ಒಳಪಡಿಸಲಾಗುತ್ತೆ. ಎಸ್‌ಐಆರ್ ಫಾರಂನಲ್ಲಿ ಗಣತಿ ನಮೂನೆಯೇ ಅತ್ಯಂತ ಮುಖ್ಯ. ಬೂತ್ ಮಟ್ಟದ ಅಧಿಕಾರಿಗಳು ಪ್ರತಿ ಮನೆಗೆ ಭೇಟಿ ನೀಡಿ 2 ಸೆಟ್ ಗಣತಿ ನಮೂನೆಗಳನ್ನ ತಲುಪಿಸಲಿದ್ದಾರೆ. ವಿಶೇಷವೆಂದರೆ ಗಣತಿ ನಮೂನೆಯಲ್ಲಿರುವ ಪ್ರತಿ ಮತದಾರರಿಗೂ ಪ್ರತ್ಯೇಕ ಕ್ಯೂಆರ್ ಕೋಡ್ ಇರಲಿದೆ. ಬೂತ್ ಮಟ್ಟದ ಅಧಿಕಾರಿಗಳು ಗಣತಿ ನಮೂನೆಯನ್ನು ಮನೆಗೆ ತಂದಾಗ ಸಾರ್ವಜನಿಕರು ಅದರಲ್ಲಿ 1 ಸೆಟ್ ಅನ್ನು ಸಂಪೂರ್ಣವಾಗಿ ಭರ್ತಿ ಮಾಡಿ ಅಧಿಕಾರಿಗಳಿಗೆ ಮರಳಿ ನೀಡಬೇಕು. ಮತ್ತೊಂದು ಸೆಟ್ ಗಣತಿ ನಮೂನೆಯನ್ನು ಭವಿಷ್ಯದ ಸಾಕ್ಷಿಗಾಗಿ ಮತದಾರರೇ ತಮ್ಮ ಬಳಿ ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು ಎಂದು ವಿವರಿಸಿದರು.

2002ರ ನಂತರ ಮತದಾರರ ಪಟ್ಟಿಯಲ್ಲಿ ಯಾರ ಹೆಸರು ದಾಖಲಾಗಿದೆಯೋ, ಅಂತಹವರ ಹೆಸರುಗಳನ್ನ ಕಡ್ಡಾಯವಾಗಿ ಪರಿಶೀಲನೆಗೆ ಒಳಪಡಿಸಲಾಗುತ್ತದೆ ಎಂದು ಮುಖ್ಯ ಚುನಾವಣಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಗ್ರಾಮ ಪಂಚಾಯತಿ ಮಟ್ಟದಲ್ಲಿ ವೋಟರ್ ಫೆಸಿಲಿಟಿ ಸೆಂಟರ್ ಓಪನ್ ಮಾಡಲಾಗುತ್ತದೆ. ಮತದಾರರು ಡೌಟ್ ಇದ್ರೆ ಪರಿಹಾರ ಕಂಡುಕೊಳ್ಳಬಹುದು. ಆಗಸ್ಟ್ 8ರಂದು ಮತದಾರರ ಕರಡು ಪಟ್ಟಿ ರಿಲೀಸ್ ಮಾಡಲಾಗುತ್ತದೆ. ಆಕ್ಷೇಪಣೆಗಳನ್ನ ಸಲ್ಲಿಸಬಹುದು ಅಂತ ಅನ್ಬುಕುಮಾರ್ ಸ್ಪಷ್ಟಪಡಿಸಿದರು.

error: Content is protected !!
Scroll to Top