ಚಲಿಸುತ್ತಿದ್ದ ಬಸ್‌ನ ಚಾಲಕ ಹೃದಯಾಘಾತದಿಂದ ಸಾವು: ಪ್ರಯಾಣಿಕರು ಅಪಾಯದಿಂದ ಪಾರು

ಅರಂತೋಡು: ಸುಳ್ಯ ಮಾರ್ಗವಾಗಿ ಬೆಂಗಳೂರಿನಿಂದ ಕುಕ್ಕೆಗೆ ಹೋಗುತ್ತಿದ್ದ ಖಾಸಗಿ ಬಸ್ಸಿನ ಚಾಲಕನಿಗೆ ಹೃದಯಾಘಾತವಾಗಿ ನಿಧನ ಹೊಂದಿದ್ದು, ಬಸ್ಸು ಬರೆಗೆ ಗುದ್ದಿ ‌ನಿಂತ ಪರಿಣಾಮ ಅದೃಷ್ಟವಶಾತ್ ಪ್ರಯಾಣಿಕರು ಪಾರಾದ ಘಟನೆ ಕಾಟಕೇರಿಯಲ್ಲಿ ಇಂದು ಮುಂಜಾನೆ ನಡೆದಿದೆ.

ಮೃತ ಚಾಲಕನನ್ನು ಶಿವಕುಮಾರ್ ಎಂದು ಗುರುತಿಸಲಾಗಿದೆ.

ಬೆಂಗಳೂರಿನಿಂದ ಗುರುವಾರ ರಾತ್ರಿ ಈ ಬಸ್ಸು ಸುಳ್ಯದತ್ತ ಹೊರಟಿತ್ತು. ಶುಕ್ರವಾರ ಮುಂಜಾನೆ ವೇಳೆ ಮಡಿಕೇರಿ ಕಳೆದು ಕಾಟಕೇರಿಯ ತಿರುವಿನಲ್ಲಿ ಬರುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.





















































 
 

ಚಾಲಕನಿಗೆ ಹೃದಯಾಘಾತವಾದ ಪರಿಣಾಮ ಬಸ್ಸು ನಿಯಂತ್ರಣ ಕಳೆದುಕೊಂಡು ಬರೆಗೆ ಬಂದು ಗುದ್ದಿದೆ. ಹೃದಯಾಘಾತದ ಸಂದರ್ಭ ಚಾಲಕ ಬಸ್ಸನ್ನು ನಿಲ್ಲಿಸಲು ಸಾಧ್ಯವಾಗದೆ ಬರೆಗೆ ಗುದ್ದಿಸಿ ‌ನಿಲ್ಲಿಸಿದ್ದಾಗಿ ಹೇಳಲಾಗುತ್ತಿದೆ.

error: Content is protected !!
Scroll to Top