ಐಪಿಎಲ್‌ ಫೈನಲ್‌ ಪಂದ್ಯ ಅಹಮದಾಬಾದ್‌ಗೆ ಶಿಫ್ಟ್‌ ಆಗಲು 10 ಸಾವಿರ ಉಚಿತ ಟಿಕೆಟ್‌ ಕೇಳಿದ್ದು ಕಾರಣ

ಸಚಿವರು, ಎಂಎಲ್‌ಎ, ಎಂಎಲ್‌ಸಿ ಸೇರಿ ಎಲ್ಲರಿಗೂ ಉಚಿತ ಟಿಕೆಟ್‌ಗೆ ಬೇಡಿಕೆ

ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಐಪಿಎಲ್ 2026ರ ಫೈನಲ್ ಪಂದ್ಯವನ್ನು ಅಹಮದಾಬಾದ್‌ಗೆ ಸ್ಥಳಾಂತರಿಸಲು 10 ಸಾವಿರ ಹೆಚ್ಚುವರಿ ಉಚಿತ ಟಿಕೆಟ್‌ಗಳ ಟಿಕೆಟ್‌ಗಳ ಬೇಡಿಕೆಯೇ ಮುಖ್ಯ ಕಾರಣ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ತಿಳಿಸಿದ್ದಾರೆ.

ಐಪಿಎಲ್ ನಿಯಮದ ಅನ್ವಯ ಕೇವಲ ಶೇ.15ರಷ್ಟು ಉಚಿತ ಟಿಕೆಟ್‌ಗಳನ್ನು ಮಾತ್ರ ಆತಿಥೇಯ ಸಂಸ್ಥೆಗೆ ನೀಡಲು ಅವಕಾಶವಿದೆ. ಆದರೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಇದಕ್ಕಿಂತ ಹೆಚ್ಚುವರಿಯಾಗಿ ಸುಮಾರು 10 ಸಾವಿರ ಟಿಕೆಟ್‌ಗಳನ್ನು ನೀಡುವಂತೆ ಪಟ್ಟು ಹಿಡಿದಿತ್ತು ಎಂದು ಹೇಳಿದರು.





















































 
 

ಮೇ 2ರಂದು ಕೆಎಸ್‌ಸಿಎ ಕಳುಹಿಸಿದ ಇ-ಮೇಲ್ ನೋಡಿ ನಾವು ಶಾಕ್‌ಗೆ ಒಳಗಾದೆವು. ಆ ಇಮೇಲ್‌ನಲ್ಲಿ ಶಾಸಕರು, ವಿಧಾನ ಪರಿಷತ್ ಸದಸ್ಯರು ಮತ್ತು ಕರ್ನಾಟಕ ಸರ್ಕಾರಕ್ಕಾಗಿ ದೊಡ್ಡ ಪ್ರಮಾಣದ ಉಚಿತ ಟಿಕೆಟ್‌ಗಳನ್ನು ಕೇಳಲಾಗಿತ್ತು. ಇಷ್ಟು ದೊಡ್ಡ ಪ್ರಮಾಣದ ಉಚಿತ ಟಿಕೆಟ್‌ಗಳನ್ನು ನೀಡಲು ಸಾಧ್ಯವಾಗದ ಕಾರಣ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದ ಕಡಿಮೆ ಆಸನ ಸಾಮರ್ಥ್ಯದಿಂದಾಗಿ (36 ಸಾವಿರ) ಬಿಸಿಸಿಐ ಫೈನಲ್ ಪಂದ್ಯವನ್ನು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂಗೆ (1.30 ಲಕ್ಷ ಸಾಮರ್ಥ್ಯ) ಸ್ಥಳಾಂತರ ಮಾಡಿದೆ.

ಒಂದು ವೇಳೆ ನಾವು ಇಷ್ಟು ದೊಡ್ಡ ಪ್ರಮಾಣದ ಉಚಿತ ಟಿಕೆಟ್‌ಗಳನ್ನು ನೀಡಿದ್ದರೆ, ಸಾಮಾನ್ಯ ಜನರಿಗೆ ಕೇವಲ ಕೆಲವು ಸಾವಿರ ಟಿಕೆಟ್‌ಗಳು ಮಾತ್ರ ಉಳಿಯುತ್ತಿದ್ದವು. ಇದು ಸುಪ್ರೀಂ ಕೋರ್ಟ್ ನಿರ್ದೇಶನಗಳ ನೇರ ಉಲ್ಲಂಘನೆಯಾಗುತ್ತಿತ್ತು ಎಂದು ಸೈಕಿಯಾ ಎಚ್ಚರಿಸಿದ್ದಾರೆ.
ಲೀಗ್ ಪಂದ್ಯಗಳಲ್ಲಿ ಕೆಲವು ರಿಯಾಯಿತಿ ಕೊಡಬಹುದು. ಆದರೆ ಪ್ಲೇ-ಆಫ್ ಮತ್ತು ಫೈನಲ್ ಪಂದ್ಯಗಳು ಸಂಪೂರ್ಣವಾಗಿ ಬಿಸಿಸಿಐ ನಿಯಂತ್ರಣದಲ್ಲಿರುತ್ತವೆ. ಅಲ್ಲಿ ಯಾವುದೇ ಶಿಷ್ಟಾಚಾರದ ಉಲ್ಲಂಘನೆಗೆ ಅವಕಾಶವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

error: Content is protected !!
Scroll to Top