ಕೊಪ್ಪಳ: ಲವ್ ಜಿಹಾದ್ ಘಟನೆಯೊಂದು ಕೊಪ್ಪಳದಲ್ಲಿ ನಡೆದುದ್ದು, ಮುಸ್ಲಿಂ ಯುವಕನನ್ನು ಹಿಡಿದು ಹಿಂದೂ ಪರ ಮುಖಂಡರು ಧರ್ಮದೇಟು ನೀಡಿದ ಘಟನೆ ನಡೆದಿದೆ.
ಹಿಂದೂ ಅಪ್ರಾಪ್ತ ಯುವತಿಯ ಜೊತೆಗೆ ಓಡಾಡುತ್ತಿದ್ದ ಮುಸ್ಲಿಂ ಯುವಕ ಸಮೀರ್‌ನಿಗೆ ಥಳಿಸಲಾಗಿದ್ದು, ಸದ್ಯ ಆತ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾನೆ. ಸಮೀರ್ ಹಿಂದೂ ಯುವತಿಯ ಜೊತೆಗೆ ಸರಸ ಸಲ್ಲಾಪವಾಡಿದ ಆರೋಪವಿದ್ದು, ಆತನ ಮೊಬೈಲ್ ಪರಿಶೀಲನೆ ನಡೆಸಿದಲ್ಲಿ ಸಾಕ್ಷಿ ದೊರೆಯುತ್ತದೆ. ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಿಂದೂ ಮುಖಂಡರು ಒತ್ತಾಯಿಸಿದ್ದಾರೆ.
ಇನ್ನು ಸಮೀರ್ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಎಂಟು ಮಂದಿ ಹಿಂದೂ ಯುವಕರ ಮೇಲೆ ಪೊಲೀಸರು ಕೇಸು ದಾಖಲಿಸಿ, ಬಂಧಿಸಿದ್ದಾರೆ.
ಪೊಲೀಸರ ಈ ಕ್ರಮಕ್ಕೆ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
























