ಆಸ್ಪತ್ರೆಯ ನೌಕರನಿಂದಲೇ ‌ರೋಗಿಯ ಸಹೋದರಿಯ ಮೇಲೆ ಅತ್ಯಾಚಾರ

ಬಾಗಲಕೋಟೆ: ಜಿಲ್ಲಾಸ್ಪತ್ರೆಯ ಹೊರಗುತ್ತಿಗೆ ನೌಕರನೊಬ್ಬ ವಿಧವೆಯೊಬ್ಬರ ಮೇಲೆ ಆಸ್ಪತ್ರೆಯ ಬಾತ್‌ರೂಮ್‌ನಲ್ಲೇ ಅತ್ಯಾಚಾರ ನಡೆಸಿರುವ ಘಟನೆ ನಡೆದಿದೆ.

ಆರೋಪಿಯನ್ನು ಆಸ್ಪತ್ರೆಯ ಡಿ ದರ್ಜೆಯ ನೌಕರ ಫರೀದ್ ಸಾಬ್ ಡಾಂಗಿ ಎಂದು ಗುರುತಿಸಲಾಗಿದೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಯೊಬ್ಬರ ಸಹೋದರಿಯ ಮೇಲೆ ಆರೋಪಿ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿದೆ. ಕಳೆದ ಒಂದು ತಿಂಗಳಿನಿಂದ ಮಹಿಳೆ ಆಸ್ಪತ್ರೆಯಲ್ಲಿ ರೋಗಿಯ ಜೊತೆಗಿದ್ದರು. ಈ ವೇಳೆ ಫರೀದ್ ಅವರ ಪರಿಚಯ ಮಾಡಿಕೊಂಡಿದ್ದ. ಆ ಬಳಿಕ ಮೇ 4 ರ ಮದ್ಯರಾತ್ರಿ ವೇಳೆ ಅವರ ಮೇಲೆ ಅತ್ಯಾಚಾರ ನಡೆಸಿದ್ದು, ನಂತರ ಮಹಿಳೆಯನ್ನು ಬಾತ್‌ರೂಮ್‌ನಲ್ಲೇ ಲಾಕ್ ಮಾಡಿ ಹೋಗಿದ್ದಾನೆ.





















































 
 

ಘಟನೆ ತಿಳಿದ ಕೂಡಲೇ ಆರೋಪಿಯನ್ನು ಸಂತ್ರಸ್ತೆಯ ಕುಟುಂಬಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಸಂಬಂಧ ಬಾಗಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಫರೀದ್‌ನನ್ನು ಕೆಲಸದಿಂದ ವಜಾ ಮಾಡಲಾಗಿದೆ.

error: Content is protected !!
Scroll to Top