ಡ್ರಗ್ಸ್‌ ಸೇವಿಸಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ : ಆರೋಪಿ ಸೆರೆ

ವಿಟ್ಲ : ಮಾದಕ ದ್ರವ್ಯ ಸೇವಿಸಿ ದ್ವಿಚಕ್ರ ವಾಹನ ಚಲಾಯಿಸಿದ ಮತ್ತು ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸ್ ಉಪನಿರೀಕ್ಷಕರೊಂದಿಗೆ ಅಸಭ್ಯವಾಗಿ ವರ್ತಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಯುವಕನೋರ್ವನನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಬಂಟ್ವಾಳದ ಕೊಳ್ನಾಡು ನಿವಾಸಿ ಮೊಹಮ್ಮದ್ ಅಸ್ಬೀರ್ (26) ಎಂದು ಗುರುತಿಸಲಾಗಿದೆ.

ಮೇ 3ರಂದು ಮಧ್ಯಾಹ್ನ ವಿಟ್ಲ ಪೊಲೀಸ್ ಉಪನಿರೀಕ್ಷಕ ಬಿ.ಎಸ್. ನಾಯಕ್ ಮತ್ತು ಅವರ ಸಿಬ್ಬಂದಿ ವಿಟ್ಲ ಚತುಷ್ಪಥ ರಸ್ತೆಯ ಜಂಕ್ಷನ್‌ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಹೆಲ್ಮೆಟ್ ಧರಿಸಿರದ ಕಾರಣ ಸ್ಕೂಟರ್‌ವೊಂದನ್ನು ತಡೆದಿದ್ದರು. ತಪಾಸಣೆ ನಡೆಸುವಾಗ ಆರೋಪಿ ಉಪನಿರೀಕ್ಷಕರೊಂದಿಗೆ ಅನುಚಿತವಾಗಿ ವರ್ತಿಸಿ, ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ. ಆತನ ವರ್ತನೆಯನ್ನು ಗಮನಿಸಿದ ಪೊಲೀಸರು, ಆತ ಮಾದಕ ದ್ರವ್ಯದ ಪ್ರಭಾವದಲ್ಲಿದ್ದಾನೆ ಎಂದು ಶಂಕಿಸಿ ವಿಚಾರಣೆ ನಡೆಸಿದಾಗ, ತಾನು ಮಾದಕ ದ್ರವ್ಯ ಸೇವಿಸಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ. ನಂತರ ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ, ಆತ ಮಾದಕ ದ್ರವ್ಯ ಸೇವಿಸಿರುವುದು ದೃಢಪಟ್ಟಿದೆ.

ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಕ್ರೈಂ ನಂ 100/2026, ಎನ್‌ಡಿಪಿಎಸ್ (NDPS) ಕಾಯ್ದೆ 1985ರ ಸೆಕ್ಷನ್ 27 (ಬಿ), ಬಿಎನ್‌ಎಸ್ (BNS) ಸೆಕ್ಷನ್ 221, ಹಾಗೂ ಕೆಎಮ್‌ವಿ (KMV) ನಿಯಮ 230(1) ರ ಅಡಿಯಲ್ಲಿ ಐಎಮ್‌ವಿ (IMV) ಕಾಯ್ದೆಯ ಸೆಕ್ಷನ್ 177 ರನ್ವಯ ಪ್ರಕರಣ ದಾಖಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.





















































 
 
error: Content is protected !!
Scroll to Top