ಪಂಚರಾಜ್ಯ ಚುನಾವಣೆ : ಪಕ್ಷಗಳ ಅಂತಿಮ ಬಲಾಬಲ

ರಾತ್ರಿಯವರೆಗೂ ನಡೆದ ಎಣಿಕೆ, ತಡರಾತ್ರಿ ಸ್ಪಷ್ಟ ಫಲಿತಾಂಶ ಘೋಷಣೆ

ನವದೆಹಲಿ : ದೇಶವೇ ಕುತೂಹಲದಿಂದ ಕಾಯುತ್ತಿದ್ದ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ದೇಶದ ರಾಜಕೀಯದಲ್ಲಿ ಭಾರಿ ಸಂಚಲನ ಉಂಟು ಮಾಡಿದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ 15 ವರ್ಷಗಳ ಸುದೀರ್ಘ ಆಡಳಿತಕ್ಕೆ ಅಂತ್ಯ ಹಾಡಿರುವ ಬಿಜೆಪಿ ಭರ್ಜರಿ ಜಯ ಸಾಧಿಸಿದೆ. ಇತ್ತ ತಮಿಳುನಾಡಿನಲ್ಲಿ ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷವು ಡಿಎಂಕೆ ಮತ್ತು ಎಐಎಡಿಎಂಕೆ ಭದ್ರಕೋಟೆಯನ್ನು ಪುಡಿಗಟ್ಟುವ ಮೂಲಕ ಇತಿಹಾಸ ನಿರ್ಮಿಸಿದೆ. ನಡುರಾತ್ರಿಯವರೆಗೂ ಮತ ಎಣಿಕೆ ನಡೆದಿದ್ದು, ಪಕ್ಷಗಳ ಅಂತಿಮ ಬಲಾಬಲ ಸ್ಪಷ್ಟವಾಗುವಾಗ ಬಹಳ ತಡವಾಗಿದೆ. ಚುನಾವಣಾ ಆಯೋಗ ಪ್ರಕಟಿಸರುವ ಪಕ್ಷಗಳ ರಾಜ್ಯವಾರು ಅಂತಿಮ ಬಲಾಬಲ ಈ ಕೆಳಗಿನಂತಿದೆ.

ಬಂಗಾಳದ ರಣಕಣದಲ್ಲಿ ಮೋದಿ-ಶಾ ಜೋಡಿಯ ತಂತ್ರಗಾರಿಕೆಗೆ ಮಮತಾ ಬ್ಯಾನರ್ಜಿ ಸೋತು ಸುಣ್ಣವಾಗಿದ್ದಾರೆ. ಒಟ್ಟು 293 ಸ್ಥಾನಗಳಲ್ಲಿ ಬಿಜೆಪಿ 206 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ದ್ವಿಶತಕ ಬಾರಿಸಿದೆ. ಆಡಳಿತಾರೂಢ ಟಿಎಂಸಿ ಕೇವಲ 81 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳುವ ಮೂಲಕ ಅಧಿಕಾರ ಕಳೆದುಕೊಂಡಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಸೋಲಾಗಿದೆ.





















































 
 

ಪಶ್ಚಿಮ ಬಂಗಾಳ ಪೂರ್ತಿ ಅರಳಿದ ಕಮಲ

ಒಟ್ಟು ಸ್ಥಾನಗಳು: 293
ಬಿಜೆಪಿ: 206 ಸ್ಥಾನಗಳು (ಸ್ಪಷ್ಟ ಬಹುಮತ)
ಟಿಎಂಸಿ: 82 ಸ್ಥಾನಗಳು
ಕಾಂಗ್ರೆಸ್: 2 ಸ್ಥಾನಗಳು
ಇತರ: 3 ಸ್ಥಾನಗಳು

ತಮಿಳುನಾಡಿನಲ್ಲಿ ದಳಪತಿ ವಿಜಯ್ ಬ್ಲಾಕ್‌ಬಸ್ಟರ್‌

ತಮಿಳುನಾಡಿನಲ್ಲಿ ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಬ್ಲಾಕ್‌ಬಸ್ಟರ್‌ ಸಿನಿಮಾದಂತೆ ಬಿರುಗಾಳಿ ಎಬ್ಬಿಸಿದೆ. 234 ಕ್ಷೇತ್ರಗಳ ಪೈಕಿ ಟಿವಿಕೆ 107 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಕೊಳತ್ತೂರು ಕ್ಷೇತ್ರದಲ್ಲಿ ಟಿವಿಕೆ ಅಭ್ಯರ್ಥಿ ಬಾಬು ವಿರುದ್ಧ ಸೋಲೊಪ್ಪಿಕೊಂಡಿರುವುದು ಡಿಎಂಕೆ ಪಾಲಿಗೆ ಭಾರಿ ಹಿನ್ನಡೆಯಾಗಿದೆ.

ಒಟ್ಟು ಸ್ಥಾನಗಳು: 234
ಟಿವಿಕೆ (ವಿಜಯ್): 107 ಸ್ಥಾನಗಳು
ಡಿಎಂಕೆ: 60 ಸ್ಥಾನಗಳು
ಎಐಎಡಿಎಂಕೆ: 47 ಸ್ಥಾನಗಳು
ಕಾಂಗ್ರೆಸ್: 05 ಸ್ಥಾನಗಳು
ಇತರ: 04 ಸ್ಥಾನಗಳು

ಕೇರಳದಲ್ಲಿ ಮುಸ್ಲಿಂಲೀಗ್‌-ಕಾಂಗ್ರೆಸ್‌ ಜಯಭೇರಿ

ಕೇರಳದಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಎಲ್​ಡಿಎಫ್ ಆಡಳಿತಕ್ಕೆ ಮತದಾರರು ಬ್ರೇಕ್ ಹಾಕಿದ್ದಾರೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ 102 ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಸಾಧಿಸಿದೆ.ಎಲ್​ಡಿಎಫ್​ನ 21 ಸಚಿವರು ಸೋತು ಹೋಗಿದ್ದಾರೆ. ಮುಖ್ಯಮತ್ರಿ ಪಿಣರಾಯಿ ವಿಜಯನ್‌ ಕೂಡ ಪ್ರಯಾಸದ ಗೆಲುವು ಕಂಡಿದ್ದಾರೆ. ಇದೇಮೊದಲ ಬಾರಿಗೆ ಕೇರಳ ಅಸೆಂಬ್ಲಿಗೆ ಬಿಜೆಪಿಯ ಮೂವರು ಪ್ರವೇಶಿಸುತ್ತಿರುವುದು ಐತಿಹಾಸಿಕ ಘಟನೆಯಾಗಿದೆ.

ಒಟ್ಟು ಸ್ಥಾನಗಳು: 140
ಯುಡಿಎಫ್ (ಕಾಂಗ್ರೆಸ್ ಮೈತ್ರಿ): 102 ಸ್ಥಾನಗಳು
ಎಲ್​ಡಿಎಫ್ (ಎಡಪಕ್ಷಗಳು): 35 ಸ್ಥಾನಗಳು
ಎನ್​ಡಿಎ (ಬಿಜೆಪಿ ಮೈತ್ರಿ): 03 ಸ್ಥಾನಗಳು

ಅಸ್ಸಾಂನಲ್ಲಿ ಬಿಜೆಪಿಗೆ ಹ್ಯಾಟ್ರಿಕ್

ಅಸ್ಸಾಂನಲ್ಲಿ ಸಿಎಂ ಹಿಮಂತ್ ಬಿಸ್ವಾ ಶರ್ಮಾ ನೇತೃತ್ವದಲ್ಲಿ ಬಿಜೆಪಿ ಹ್ಯಾಟ್ರಿಕ್ ಗೆಲುವು ದಾಖಲಿಸಿದೆ. 126 ಕ್ಷೇತ್ರಗಳ ಪೈಕಿ ಬಿಜೆಪಿ 82 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದೆ.

ಒಟ್ಟು ಸ್ಥಾನಗಳು: 126
ಬಿಜೆಪಿ: 82 ಸ್ಥಾನಗಳು
ಕಾಂಗ್ರೆಸ್: 19 ಸ್ಥಾನಗಳು
ಇತರೆ: 22 ಸ್ಥಾನಗಳು

ಪುದುಚೇರಿಯಲ್ಲಿ ಎನ್​ಡಿಎಗೆ ಮತ್ತೆ ಅಧಿಕಾರ

ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಎನ್​ಡಿಎ ಮಿತ್ರಕೂಟ 16 ಸ್ಥಾನಗಳೊಂದಿಗೆ ಮತ್ತೆ ಅಧಿಕಾರ ಹಿಡಿದಿದೆ.

ಒಟ್ಟು ಸ್ಥಾನಗಳು: 30
ಬಿಜೆಪಿ+ (ಎನ್​ಡಿಎ): 16 ಸ್ಥಾನಗಳು
ಡಿಎಂಕೆ: 05 ಸ್ಥಾನಗಳು
ಕಾಂಗ್ರೆಸ್: 03 ಸ್ಥಾನಗಳು
ಟಿವಿಕೆ: 02 ಸ್ಥಾನಗಳು

error: Content is protected !!
Scroll to Top