ತಮಿಳುನಾಡಿನಲ್ಲಿ ವಿಜಯ್‌ ನೇತೃತ್ವದ ಟಿವಿಕೆ ಕಮಾಲ್‌ : 100ಕ್ಕೂ ಅಧಿಕ ಸ್ಥಾನಗಳಲ್ಲಿ ಮುನ್ನಡೆ

ಪಶ್ಚಿಮ ಬಂಗಾಳದಲ್ಲಿ ಮುನ್ನಡೆ ವಿಸ್ತರಿಸಿಕೊಂಡ ಬಿಜೆಪಿ

ನವದೆಹಲಿ: ಪಂಚರಾಜ್ಯಗಳ ಚುನಾವಣೆಯ ಮತ ಎಣಿಕೆ ಇಂದು ನಡೆಯುತ್ತಿದ್ದು, ತಮಿಳುನಾಡಿನಲ್ಲಿ ಎಲ್ಲ ಲೆಕ್ಕಾಚಾರ ಬುಡಮೇಲಾಗುವ ಸಾಧ್ಯತೆ ಗೋಚರಿಸುತ್ತಿದೆ. ಇಲ್ಲಿ ಚಿತ್ರನಟ ವಿಜಯ್‌ ನೇತೃತ್ವದ ಟಿವಿಕೆ ಪಕ್ಷ ಎಲ್ಲ ಸಮೀಕ್ಷೆಗಳನ್ನು ತಲೆಕೆಳಗಾಗಿಸಿ ಮುನ್ನಡೆಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡು ಅಚ್ಚರಿ ಹುಟ್ಟಿಸಿದೆ. ಇದಕ್ಕೂ ಹೆಚ್ಚಿನ ಅಚ್ಚರಿಯೆಂದರೆ ಆಡಳಿತರೂಢ ಡಿಎಂಕೆ ತೃತೀಯ ಸ್ಥಾನದಲ್ಲಿರುವುದು. ಬಿಜೆಪಿ ಒಳಗೊಂಡಿರುವ ಎಐಎಡಿಎಂಕೆ ದ್ವಿತೀಯ ಸ್ಥಾನದಲ್ಲಿದ್ದು, ಸದ್ಯದ ಮುನ್ನಡೆ ಯಾರ ಊಹೆಗೂ ನಿಲುಕದ ಫಲಿತಾಂಶವಾಗಿದೆ.

ಯಾವ ಚುನಾವಣೋತ್ತರ ಸಮೀಕ್ಷೆಯೂ ಟಿವಿಕೆ ಪಕ್ಷವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಒಂದೆರಡು ಸಮೀಕ್ಷೆಗಳು ಟಿವಿಕೆ ನಿರ್ಣಾಯಕವಾಗಬಹುದು ಎಂದಿದ್ದರೂ ಇಷ್ಟೊಂದು ಮತ ಗಳಿಸಬಹುದು ಎಂಬ ಭವಿಷ್ಯ ನುಡಿದಿರಲಿಲ್ಲ. ಎಲ್ಲಕ್ಕೂ ಮಿಗಿಲಾಗಿ ತಮಿಳುನಾಡಿನ ಜನರೇ ಟಿವಿಕೆಯ ಆರಂಭಿಕ ಸಾಧನೆಯನ್ನು ನೋಡಿ ಆಶ್ಚರ್ಯಪಟ್ಟಿದ್ದಾರೆ.





















































 
 

ಸದ್ಯದ ಲೆಕ್ಕಾಚಾರದಂತೆ ಟಿವಿಕೆ 103 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಎಐಎಡಿಎಂಕೆ 78 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡು ದ್ವಿತೀಯ ಸ್ಥಾನದಲ್ಲಿದ್ದರೆ 50 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡು ಆಡಳಿತರೂಢ ಡಿಎಂಕೆ ಮರ್ಮಾಘಾತ ಅನುಭವಿಸಿದೆ. ಸತತವಾದ ಹಿಂದೂ ವಿರೋಧಿ ನಿಲುವು ಮತ್ತು ಆಡಳಿತ ವಿರೋಧಿ ಅಲೆ ಡಿಎಂಕೆಗೆ ಮುಳುವಾಗುವ ಸಾಧ್ಯತೆ ಗೋಚರಿಸುತ್ತಿದೆ.

ಉಳಿದಂತೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ತನ್ನ ಮುನ್ನಡೆಯನ್ನು ವಿಸ್ತರಿಸಿಕೊಂಡು 156 ಸ್ಥಾನಕ್ಕೇರಿದೆ. ತೀವ್ರ ಪೈಪೋಟಿ ನೀಡುತ್ತಿರುವ ಆಡಳಿತರೂಢ ಟಿಎಂಸಿ 121 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ.

ಕೇರಳದಲ್ಲಿ ಯುಡಿಎಫ್‌ 95 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದು, ನಿಚ್ಚಳ ಬಹುಮತ ಪಡೆಯುವ ಸಾಧ್ಯತೆ ಗೋಚರಿಸುತ್ತಿದೆ. ಆಡಳಿತರೂಢ ಎಲ್‌ಡಿಎಫ್‌ 44 ಸ್ಥಾನಗಳಲ್ಲಷ್ಟೇ ಮುನ್ನಡೆಯಲ್ಲಿದೆ.

ಪುದುಚೇರಿಯಲ್ಲಿ ಬಿಜೆಪಿ 22 ಮತ್ತು ಕಾಂಗ್ರೆಸ್‌ 6 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಅಸ್ಸಾಂನಲ್ಲಿ ಬಿಜೆಪಿ 95 ಸ್ಥಾನಗಳಲ್ಲಿ ಮುಂದಿದೆ. ಕಾಂಗ್ರೆಸ್‌ 25 ಸ್ಥಾನಗಳಷ್ಟೇ ಮುನ್ನಡೆ ಕಾಯ್ದುಕೊಂಡಿದೆ.

error: Content is protected !!
Scroll to Top