ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು: ಅನುಮಾನಾಸ್ಪದ ಹಲವು ಸಂಗತಿಗಳು ಬೆಳಕಿಗೆ

ಕಡಬ: ಕೆಲ ದಿನಗಳ ಹಿಂದೆ ಬಾಡಿಗೆ ಮನೆಯೊಂದರಲ್ಲಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ‌ಸಂಬಂಧಿಸಿದ ಹಾಗೆ ಹೊಸ ತಿರುವು ದೊರೆತಿದೆ.

ಚೆನ್ನಪ್ಪ ಪೂಜಾರಿ ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಆರಂಭದಲ್ಲಿ ರವಿಚಂದ್ರ ಎಂಬವರು ದೂರು ನೀಡಿದ್ದರು. ಇದರಲ್ಲಿ ಯಾವುದೇ ಅಸಹಜ‌ ಸಾವಿನ ಅನುಮಾನ ಇಲ್ಲ ಎಂದು ಅವರು ಹೇಳಿದ್ದರು.

ಆದರೆ ಪ್ರಕರಣಕ್ಕೆ ‌ಸಂಬಂಧಿಸಿದ ಹಾಗೆ ಘಟನಾ ಸ್ಥಳ‌ ಪರಿಶೀಲನೆಯ ವೇಳೆ ಕೆಲವು ಅನುಮಾನಾಸ್ಪದ ‌ಸಂಗತಿಗಳು ಬೆಳಕಿಗೆ ಬಂದಿವೆ. ಮೃತರು ಆತ್ಮಹತ್ಯೆಯ ವೇಳೆ ಕೋಣೆಯ ಬಾಗಿಲಿಗೆ ಒಳಗಿನಿಂದ ಲಾಕ್ ಮಾಡದೇ ಇರುವುದು, ಅವರ ಜೇಬಿನಲ್ಲಿ ಡೆತ್ ನೋಟ್ ಇರುವುದು ಸಾಕಷ್ಟು ಸಂದೇಹಗಳಿಗೆ ಕಾರಣವಾಗಿದೆ.





















































 
 

ಈ ಸಂಬಂಧ ಕಡಬ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

error: Content is protected !!
Scroll to Top