ಯಾದಗಿರಿ: ಸುರಪುರ ತಾಲೂಕಿನ ಸತ್ಯಂಪೇಟೆ ಗ್ರಾಮದಲ್ಲಿ ಬಿಸಿಲಿನ ಬೇಗೆಗೆ ಕೂಲಿ ಕಾರ್ಮಿಕನೊಬ್ಬ ಮೃತಪಟ್ಟ ಘಟನೆ ನಡೆದಿದೆ.
ಸಿದ್ದಪ್ಪ ಕೊಂಡಗುಳಿ ಎಂಬವರೇ ಮೃತ ದುರ್ದೈವಿ.
ಸಿದ್ದಪ್ಪ ಅವರು ಕೂಲಿ ಕೆಲಸ ಮಾಡುತ್ತಿದ್ದರು. ಎಂದಿನಂತೆಯೇ ತಮ್ಮ ಕೆಲಸ ಮುಗಿಸಿ ಮನೆಗೆ ಮರಳಿದ ಅವರು ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿರುವುದಾಗಿದೆ.
ಬಿಸಿಲು ಹೆಚ್ಚಾಗಿದ್ದ ಕಾರಣ ದಾಹ ತೀರಿಸಿಕೊಳ್ಳಲು ಮನೆಗೆ ಬಂದ ಕೂಡಲೇ ಅವರು ನೀರು ಕುಡಿದಿದ್ದಾರೆ. ಅದಾದ ಕೆಲವೇ ಕ್ಷಣಗಳಲ್ಲಿ ಅವರು ಮೃತಪಟ್ಟಿರುವುದಾಗಿದೆ.
ಬಡ ಕುಟುಂಬದ ಸಿದ್ದಪ್ಪ ಅವರ ಸಾವಿನಿಂದ ಮನೆಯವರು ಕಂಗಾಲಾಗಿದ್ದಾರೆ. ಮೃತರ ಕುಟುಂಬಕ್ಕೆ ಸರ್ಕಾರ ನೆರವಾಗುವಂತೆ ಕರ್ನಾಟಕ ರಾಜ್ಯ ರೈತ ಸಂಘ ಮನವಿ ಮಾಡಿದೆ.
























