ತಂದೆಗೆ ಔಷಧ ತರಲು ಹೋದ ಬಾಲಕನ ಮೇಲೆ ಬಸ್ ಹರಿದು ಸಾವು

ಬೆಂಗಳೂರು: ತಂದೆಗೆ ಔಷಧ ತರಲೆಂದು ಹೋದ ಬಾಲಕ ಅಪಘಾತದಲ್ಲಿ ಭೀಕರವಾಗಿ ಮೃತಪಟ್ಟ ಘಟನೆ ನಡೆದಿದೆ.

ವರುಣ್ (16) ಎಂಬಾತನೇ ‌ಮೃತ ದುರ್ದೈವಿ.

ಬಾಗಲೂರು – ಹೆಣ್ಣೂರು ‌ರಸ್ತೆಯಲ್ಲಿ ನಡೆದ ಭೀಕರ ಅಪಘಾತದಲ್ಲಿ ವರುಣ್ ಸಾವನ್ನಪ್ಪಿರುವುದಾಗಿದೆ. ಅಪ್ಪನಿಗೆ ಅನಾರೋಗ್ಯದ ಹಿನ್ನೆಲೆ ವರುಣ್ ಔಷಧ ತರಲು ಹೋಗಿದ್ದು, ರಸ್ತೆಯಲ್ಲಿ ತಲೆ‌ ತಿರುಗಿ ಬಿದ್ದಿದ್ದಾನೆ. ಈ ಸಂದರ್ಭದಲ್ಲಿ ಒಮ್ಮೆಲೇ ಬಂದ ಖಾಸಗಿ ಬಸ್ ಆತನ ಮೇಲೆ ಹರಿದು ವರುಣ್ ದಾರುಣವಾಗಿ ‌ಸಾವನ್ನಪ್ಪಿದ್ದಾನೆ.





















































 
 

ಈ ದೃಶ್ಯ ಸಿಸಿ‌ಟಿವಿಯಲ್ಲಿ ‌ಸೆರೆಯಾಗಿದೆ. ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

error: Content is protected !!
Scroll to Top