ಅತಿ ವೇಗದಿಂದ ಬಂದ ಕಾರು ಢಿಕ್ಕಿ: ವ್ಯಕ್ತಿ ಸಾವು

ಹುಬ್ಬಳ್ಳಿ: ರಸ್ತೆ ಪಕ್ಕದಲ್ಲಿ ಕೆಟ್ಟು ನಿಂತ ಜೆಸಿಬಿಯನ್ನು ರಿಪೇರಿ ಮಾಡುತ್ತಿದ್ದ ವ್ಯಕ್ತಿಗೆ ಎದುರಿನಿಂದ ವೇಗವಾಗಿ ಬಂದ ಕಾರೊಂದು ಗುದ್ದಿದ್ದು, ವ್ಯಕ್ತಿಯ ರುಂಡ ದೇಹದಿಂದ ಬೇರ್ಪಟ್ಟು ಕಾರಿನ ಎಂಜಿನ್ ಒಳಗೆ ಸಿಲುಕಿದ ಘಟನೆ ಕುಂದಗೋಳದ ಶೇರವಾಡದ ಬಳಿ ನಡೆದಿದೆ.

ಸದಾನಂದ ಕಾಟೇಗಾರ(32) ಮೃತ ದುರ್ದೈವಿ. ಇವರು ಶೇರವಾಡ ಗ್ರಾಮದವರು ಎಂದು ತಿಳಿದು ಬಂದಿದೆ.

ಹಾಳಾಗಿ ನಿಂತಿದ್ದ ಬುಲ್ಡೋಸರ್ ಅನ್ನು ಸರಿಪಡಿಸಲು ಸದಾನಂದ ಅವರು ಕಾರ್ಯ ನಿರ್ವಹಿಸುವ ಸಂದರ್ಭದಲ್ಲಿ ವೇಗವಾಗಿ ಬಂದ ಕಾರು ಢಿಕ್ಕಿ ಹೊಡೆದಿರುವುದಾಗಿದೆ. ಪರಿಣಾಮ ಅವರ ರುಂಡ ದೇಹದಿಂದ ಬೇರಾಗಿ ಕಾರಿನ ಎಂಜಿನ್ ಒಳಗೆ ಸಿಲುಕಿಕೊಂಡಿದೆ.























































 
 

ಕಾರಿನಲ್ಲಿ ಐವರು ಪ್ರಯಾಣಿಸುತ್ತಿದ್ದು, ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಕಾರು ಚಾಲಕನ ಅಜಾಗರೂಕತೆ ಮತ್ತು ಅತಿ ವೇಗವೇ ಈ ದುರಂತಕ್ಕೆ ಕಾರಣವಾಗಿದೆ.

ಹುಬ್ಬಳ್ಳಿ ಗ್ರಾಮೀಣ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

error: Content is protected !!
Scroll to Top