ಬಳ್ಳಾರಿ: ಎರಡು ಗ್ಯಾಸ್ ಸಿಲಿಂಡರ್‌ಗಳು ಸ್ಪೋಟಗೊಂಡ ಪರಿಣಾಮ ಹೊಟೇಲ್ ಒಂದು ಬೆಂಕಿಗೆ ಹೊತ್ತಿ ಉರಿದ ಘಟನೆ ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆಯಲ್ಲಿ ನಡೆದಿದೆ.
ಈರಣ್ಣ ಎನ್ನುವವರ ಹೊಟೇಲ್‌ನಲ್ಲಿ ರಾತ್ರಿ ಸುಮಾರು 2 ಗಂಟೆಯ ಸುಮಾರಿಗೆ ಈ ದುರ್ಘಟನೆ ನಡೆದಿದೆ. ಈರಣ್ಣ ಅವರ ಕುಟುಂಬದ 9 ಜನರು ಹೊಟೇಲ್‌ನಲ್ಲಿ ಮಲಗಿದ್ದು, ಇದರಲ್ಲಿ 10 ವರ್ಷದ ಶ್ರೀನಿವಾಸ್ ಎಂಬವನಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಗಾಯಾಳು ಬಾಲಕನನ್ನು ವಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ.
ಹೊಟೇಲ್‌ನ ವಸ್ತುಗಳೆಲ್ಲಾ ಬೆಂಕಿಗೆ ಆಹುತಿಯಾಗಿದೆ. ಅಕ್ಕಪಕ್ಕದಲ್ಲಿದ್ದ ಅಂಗಡಿಗಳಿಗೂ ಹಾನಿಯಾಗಿವೆ. ಜೀವನೋಪಾಯಕ್ಕಾಗಿ ಇದ್ದ ಹೊಟೇಲ್ ಬೆಂಕಿಗೆ ಕರಕಲಾಗಿದ್ದು, ಈರಣ್ಣ ಅವರು ಕಂಗಾಲಾಗಿದ್ದಾರೆ.
ತೆಕ್ಕಲಕೋಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

























