ಶ್ರೀ ವಿಷ್ಣುಮೂರ್ತಿ ವಯನಾಟ್ ಕುಲವನ್ ದೈವಸ್ಥಾನ
ವಿಟ್ಲ: ಕನ್ಯಾನದ ಸಮೀಪ ಕುಟ್ಟಿತಡ್ಕದಲ್ಲಿರುವ ಶ್ರೀ ವಿಷ್ಣುಮೂರ್ತಿ ವಯನಾಟ್ ಕುಲವನ್ ಕ್ಷೇತ್ರದ ವಾರ್ಷಿಕ ಕೆಂಡಸೇವೆ ಮೇ 2ರಂದು ಜರುಗಲಿದೆ. ಬೆಳಗ್ಗೆ 6ಕ್ಕೆ ಮೆಲೇರಿ ರಚನೆ, ಸಂಜೆ 6ಕ್ಕೆ ದೀಪ ಪ್ರಜ್ವಲನೆ, 7ಕ್ಕೆ ವಿಷ್ಣುಮೂರ್ತಿ ಭಜನಾ ಮಂಡಳಿಯವರಿಂದ ಭಜನೆ, ರಾತ್ರಿ 7.30ಕ್ಕೆ ಭಂಡಾರ ತೆಗೆಯುವುದು, 8ಕ್ಕೆ ಮೆಲೇರಿಗೆ ಅಗ್ನಿಸ್ಪರ್ಶ, 10ಕ್ಕೆ ಅನ್ನ ಸಂತರ್ಪಣೆ, ರಾತ್ರಿ 12ರಿಂದ ಕುಳಿಚ್ಚಾಟಂ ದರ್ಶನ, ಮೇ 3ರಂದು ಮುಂಜಾನೆ 4ಕ್ಕೆ ವಿಷ್ಣುಮೂರ್ತಿ ದೈವದ ಕೆಂಡಸೇವೆ, ಬೆಳಗ್ಗೆ 5ಕ್ಕೆ ಪ್ರಸಾದ ವಿತರಣೆ, 6ರಿಂದ ರಾಜನ್ ಗುಳಿಗ ದೈವದ ಕೋಲ ನೆರವೇರಲಿದೆ.
ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಮೇ 2ರಂದು ರಾತ್ರಿ 8.30ಕ್ಕೆ ಶ್ರೀ ವಿಷ್ಣುಮೂರ್ತಿ ಚಿಣ್ಣರ ಬಳಗ ಕುಟ್ಟಿತಡ್ಕ ಇವರಿಂದ ನೃತ್ಯ ವೈವಿಧ್ಯ, ರಾತ್ರಿ 1ರಿಂದ ಶ್ರೀ ವಿಷ್ಣುಮೂರ್ತಿ ವಯನಾಟ್ ಕುಲವನ್ ಯುವಜನ ಸಂಘ ಅರ್ಪಿಸುವ ಪೌರಾಣಿಕ ನಾಟಕ ಪ್ರದರ್ಶನಗೊಳ್ಳಲಿದೆ. ಮೇ 3ರಂದು ಸಂಜೆ 6ಕ್ಕೆ ಕೈಮೀದ್ ನೆರವೇರಲಿದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.

