ಟಿಸಿಎಸ್‌ ಲವ್‌ ಜಿಹಾದ್‌ ಮಾಸ್ಟರ್‌ ಮೈಂಡ್‌ ನಿದಾ ಖಾನ್‌ಗಿಲ್ಲ ಜಾಮೀನು

ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದ ಕೋರ್ಟ್‌

ನಾಸಿಕ್ : ನಾಸಿಕ್‌ನಲ್ಲಿರುವ ಟಿಸಿಎಸ್‌ನಲ್ಲಿ ನಡೆದಿರುವ ಇಲ್‌ ಜಿಹಾದ್‌ ಪ್ರಕರಣದ ಸೂತ್ರಧಾರಿ ಎನ್ನಲಾಗಿರುವ ನಿದಾ ಖಾನ್‌ಗೆ ಮಧ್ಯಂತರ ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿದೆ. ಅವಳ ಜಾಮೀನು ಅರ್ಜಿಯನ್ನು ಏಪ್ರಿಲ್ 27ಕ್ಕೆ ವಿಚಾರಣೆ ನಡೆಸಲಾಗುವುದು. ನಿದಾ ಖಾನ್ ವಕೀಲರು ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಬಾಕಿ ಇರುವವರೆಗೆ ಮಧ್ಯಂತರ ಜಾಮೀನು ಕೋರಿದ್ದರು. ಜಾಮೀನು ಅರ್ಜಿ ಮತ್ತು ಮಧ್ಯಂತರ ಪರಿಹಾರ ಅರ್ಜಿ ಎರಡರ ಮುಂದಿನ ವಿಚಾರಣೆ ಏಪ್ರಿಲ್ 27ಕ್ಕೆ ನಡೆಯಲಿದೆ.

ನಾಸಿಕ್‌ನ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಕಚೇರಿಯಲ್ಲಿ ಧಾರ್ಮಿಕ ಮತಾಂತರ ಮತ್ತು ಮಹಿಳಾ ಸಹೋದ್ಯೋಗಿಗಳ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಆರೋಪಿಯಾಗಿರುವ ನಿದಾ ಖಾನ್ ಶನಿವಾರ ನಾಸಿಕ್ ಸೆಷನ್ಸ್ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದಳು.























































 
 

ನಾನು 2 ತಿಂಗಳ ಗರ್ಭಿಣಿ, ಹೀಗಾಗಿ ಜಾಮೀನು ನೀಡಿ ಎಂದು ಆಕೆ ಮನವಿ ಮಾಡಿದ್ದಳು. ಆಕೆ ಪರಾರಿಯಾಗಿದ್ದು, ಆಕೆಯ ಪರ ವಕೀಲರು ಅರ್ಜಿ ವಿಚಾರಣೆಗೆ ಹಾಜರಾಗಿದ್ದರು. ನಾಸಿಕ್ ಟಿಸಿಎಸ್ ಕಂಪನಿಯ ಧಾರ್ಮಿಕ ಮತಾಂತರ ಮತ್ತು ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಲ್ಲಿಯವರೆಗೆ 8 ಉದ್ಯೋಗಿಗಳನ್ನು ಬಂಧಿಸಿದ್ದಾರೆ. ನಿದಾ ಖಾನ್ ಅವರನ್ನು ಪತ್ತೆಹಚ್ಚಲು 3 ತಂಡಗಳನ್ನು ರಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ಒಂದು ತಂಡ ಮುಂಬ್ರಾ ತಲುಪಿದೆ.

ದೌರ್ಜನ್ಯ, ಬಲವಂತದ ಮತಾಂತರಕ್ಕೆ ಯತ್ನಿಸುವುದು, ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವುದು, ಕಿರುಕುಳ ಮತ್ತು ನಾಸಿಕ್ ಘಟಕದಲ್ಲಿ ಮಹಿಳಾ ಉದ್ಯೋಗಿಗಳ ಮಾನಸಿಕ ಕಿರುಕುಳ ಸೇರಿದಂತೆ ಆರೋಪಗಳಿಗೆ ಸಂಬಂಧಿಸಿದ 9 ಪ್ರಕರಣಗಳನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ನಡೆಸುತ್ತಿದೆ.

ತಲೆಮರೆಸಿಕೊಂಡಿರುವ 26 ವರ್ಷದ ನಿದಾ ಖಾನ್ ತನ್ನ ಎರಡು ತಿಂಗಳ ಗರ್ಭಧಾರಣೆಯನ್ನು ಉಲ್ಲೇಖಿಸಿ ನಿರೀಕ್ಷಣಾ ಜಾಮೀನು ಕೋರಿದ್ದಳು. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ನಾಸಿಕ್ ಬಿಪಿಒ ಘಟಕದಲ್ಲಿ ನಡೆದ ಬಲವಂತದ ಧಾರ್ಮಿಕ ಮತಾಂತರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ನಿದಾ ಖಾನ್ ಮಾಸ್ಟರ್ ಮೈಂಡ್ ಎಂದು ಪೊಲೀಸರು ಆರೋಪಿಸಿದ್ದಾರೆ.

error: Content is protected !!
Scroll to Top