ಸಾಕು ನಾಯಿಗಳ ದಾಳಿಯಿಂದ ಗಂಭೀರ ಗಾಯಗೊಂಡ ಬಾಲಕ

ಚಿಕ್ಕಮಗಳೂರು: ಏಳು ವರ್ಷದ ಬಾಲಕನ ಮೇಲೆ ಸಾಕು ನಾಯಿಗಳು ಗುಂಪಾಗಿ ದಾಳಿ‌‌ ನಡೆಸಿರುವ ಭೀಕರ ಘಟನೆ ಕಳಸದ ಕೆಳಗೂರು ‌ಗ್ರಾಮದಲ್ಲಿ ನಡೆದಿದೆ.

ಗಂಭೀರವಾಗಿ ಗಾಯಗೊಂಡಿರುವ ಬಾಲಕನನ್ನು ಮಾಧವ ಎಂದು ಗುರುತಿಸಲಾಗಿದೆ. ಹುಡುಗ ಕಾಫಿ ತೋಟದ ಮನೆಯ ಮುಂದೆ ಆಟವಾಡುತ್ತಿದ್ದ. ಕಳೆದ ನಾಲ್ಕೈದು ವರ್ಷಗಳಿಂದ ಬಾಲಕನ ಹೆತ್ತವರು ತಮಿಳುನಾಡಿನಿಂದ ‌ಕೆಳಗೂರಿಗೆ ಬಂದು ಖಾಸಗಿ ಕಾಫಿ ಎಸ್ಟೇಟ್‌ನಲ್ಲಿ ‌ಕೆಲಸ‌ ಮಾಡುತ್ತಿದ್ದರು. ಎಂದಿನಂತೆ ಬಾಲಕನ ಹೆತ್ತವರು ಕೆಲಸಕ್ಕೆ ಹೋಗಿದ್ದು ಬಾಲಕ ಆಟವಾಡುತ್ತಿದ್ದ. ಈ‌ ವೇಳೆ ತೋಟದಲ್ಲಿದ್ದ ಐದಾರು ಸಾಕು ನಾಯಿಗಳು ಬಾಲಕನ ಮೇಲೆ ದಾಳಿ ಮಾಡಿವೆ. ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ.

ನಾಯಿಗಳ ದಾಳಿಯಿಂದ ಬಾಲಕನ ಕುತ್ತಿಗೆ, ತಲೆ, ಭುಜದ ಭಾಗಕ್ಕೆ ಗಂಭೀರ ಪ್ರಮಾಣದಲ್ಲಿ ಗಾಯಗಳಾಗಿವೆ. ಬಾಲಕನ ಕಿರುಚಾಟ ಕೇಳಿ ಸ್ಥಳೀಯರು ಸ್ಥಳಕ್ಕೆ ಬಂದಿದ್ದು, ಅದಾಗಲೇ ಹುಡುಗ ಚಿಂತಾಜನಕ ಸ್ಥಿತಿಗೆ ತಲುಪಿದ್ದ. ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಆತನನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.























































 
 

ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!
Scroll to Top