ಮನೆಯಂಗಳದಲ್ಲಿ ‌ನಿಲ್ಲಿಸಿದ್ದ ಸ್ಕೂಟಿಗೆ ಕನ್ನ ಹಾಕಿದ ಕಳ್ಳ

ಕಾರ್ಕಳ: ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ‌ಸ್ಕೂಟಿಯನ್ನು ಮನೆಯ ಬಾಗಿಲು ಒಡೆದು ಒಳನುಗ್ಗಿ, ಸ್ಕೂಟಿಯ ಕೀ ತೆಗೆದುಕೊಂಡು ಕಳ್ಳನೊಬ್ಬ ಎಗರಿಸಿಕೊಂಡು ಹೋದ ಘಟನೆ ಕಸಬಾ ಗ್ರಾಮದ ಆನಂದನಗರದಲ್ಲಿ ‌ನಡೆದಿದೆ.

ಕರಿಯಕಲ್ಲು ‌ನಿವಾಸಿ ಹರೀಶ್ ಶೆಟ್ಟಿ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ. ಹರೀಶ್ ಅವರು ಉಜಿರೆಯಲ್ಲಿ ಕೆಲಸ ಮಾಡುತ್ತಿದ್ದು ಎ. 16 ರಂದು ತೆರಳಿದ್ದರು. ಎ. 19 ರಂದು ಹರೀಶ್ ಅವರಿಗೆ ಸಂಬಂಧಿಕರು ಕರೆ ಮಾಡಿ ಮನೆಯ ಬಾಗಿಲು ಒಡೆದಿರುವ ಬಗ್ಗೆ ಮಾಹಿತಿ ನೀಡಿದ್ದು, ಈ ಸಂದರ್ಭದಲ್ಲಿ ಕಳ್ಳತನ ನಡೆದಿರುವ ವಿಷಯ ಬೆಳಕಿಗೆ ಬಂದಿದೆ.

ಎ. 19 ರಂದು ಕಳ್ಳ ಮನೆಯ ಬಾಗಿಲು ಒಡೆದು ಮನೆಯೊಳಗೆ ಪ್ರವೇಶಿಸಿದ್ದಾನೆ. ಕಪಾಟಿನಲ್ಲಿದ್ದ ಬಟ್ಟೆಬರೆಗಳನ್ನೆಲ್ಲಾ ‌ಚೆಲ್ಲಾಪಿಲ್ಲಿ ಮಾಡಿದ್ದಾನೆ. ಬಳಿಕ ಮನೆಯೊಳಗಿದ್ದ ಸ್ಕೂಟಿ ಕೀ ತೆಗೆದು ಅಂಗಳದಲ್ಲಿದ್ದ ಗಾಡಿಯನ್ನು ಎಗರಿಸಿದ್ದಾನೆ. ಘಟನೆಯ ದೃಶೇಯಾವಳಿಗಳು ಸಿಸಿಟಿವಿಯಲ್ಲಿ ದಾಖಲಾಗಿವೆ.























































 
 

ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ.

error: Content is protected !!
Scroll to Top