ಭಾರತದ ತೈಲ ಟ್ಯಾಂಕರ್‌ಗಳಿಗೆ ಶುಲ್ಕವಿಲ್ಲ : ಇರಾನ್‌ ಭರವಸೆ

ಹಾರ್ಮುಜ್‌ ಜಲಸಂಧಿ ಹಾದು ಹೋಗುವ ಹಡಗುಗಳಿಂದ ಶುಲ್ಕ ವಸೂಲಿ

ಟೆಹರಾನ್: ಇರಾನ್ ಬಂದರುಗಳನ್ನು ಅಮೆರಿಕ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಮುಂದಾಗಿದ್ದು, ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನತೆ ಹೆಚ್ಚಾಗಿದೆ. ಈ ನಡುವೆ ಹಾರ್ಮುಜ್ ಜಲಸಂಧಿಯ ಮೂಲಕ ಸಾಗುವ ಭಾರತೀಯ ಟ್ಯಾಂಕರ್‌ಗಳಿಗೆ ಯಾವುದೇ ಸುಂಕವನ್ನು ವಿಧಿಸುವುದಿಲ್ಲ ಎಂದು ಇರಾನ್ ಭಾರತಕ್ಕೆ ಮತ್ತೆ ಭರವಸೆ ನೀಡಿದೆ.

ಉಭಯ ರಾಷ್ಟ್ರಗಳು ಬಲವಾದ ಸಂಬಂಧ ಹೊಂದಿದ್ದು, ಸಾಮಾನ್ಯ ಹಿತಾಸಕ್ತಿ ಹೊಂದಿವೆ ಎಂದು ಭಾರತದಲ್ಲಿರುವ ಇರಾನ್ ರಾಯಭಾರಿ ಹೇಳಿದ್ದು, ಹಾರ್ಮುಜ್ ಜಲಸಂಧಿಯಲ್ಲಿ ಭಾರತೀಯ ಹಡಗುಗಳ ಸಂಚಾರಕ್ಕೆ ನಿರಂತರ ಸಹಕಾರವನ್ನು ಸೂಚಿಸಿದ್ದಾರೆ. ಅಮೆರಿಕದ ದಿಗ್ಬಂಧನದ ಬೆದರಿಕೆ ನಡುವೆ ಈ ಪ್ರದೇಶದಲ್ಲಿ ಅನಿಶ್ಚಿತತೆ ಹೆಚ್ಚಾಗುತ್ತಿರುವಂತೆಯೇ ಈ ಭರವಸೆ ನೀಡಿದ್ದಾರೆ.























































 
 

ಹಾರ್ಮುಜ್ ಜಲಸಂಧಿ ಮೂಲಕ ಹಾದುಹೋಗುವ ಭಾರತೀಯ ಟ್ಯಾಂಕರ್‌ಗಳು ಟೋಲ್ ಪಾವತಿಸುವ ಅಗತ್ಯವಿಲ್ಲ ಎಂದು ಭಾರತದಲ್ಲಿ ಇರಾನ್‌ನ ರಾಯಭಾರಿ ಮೊಹಮ್ಮದ್ ಫತಾಲಿ ಹೇಳಿದ್ದಾರೆ. ಟೆಹ್ರಾನ್ ನವದೆಹಲಿಯೊಂದಿಗಿನ ತನ್ನ ಸಂಬಂಧವನ್ನು ಗೌರವಿಸುತ್ತದೆ ಮತ್ತು ಎರಡೂ ದೇಶಗಳು ಪರಸ್ಪರ ಹಿತಾಸಕ್ತಿಗಳನ್ನು ಮತ್ತು ಸಾಮಾನ್ಯ ಭವಿಷ್ಯವನ್ನು ಹಂಚಿಕೊಳ್ಳುತ್ತವೆ ಎಂದು ಅವರು ಹೇಳಿದರು.

ಕಡಲ ಸಂಚಾರಕ್ಕೆ ಸಂಬಂಧಿಸಿದಂತೆ ಇರಾನ್ ಭಾರತ ಸರ್ಕಾರದೊಂದಿಗೆ ನಿಕಟ ಸಂಪರ್ಕದಲ್ಲಿದೆ. ಆಯಕಟ್ಟಿನ ಪ್ರಮುಖ ಜಲಮಾರ್ಗದ ಮೂಲಕ ಭಾರತೀಯ ಹಡಗುಗಳ ಸುಗಮ ಹಾದಿ ಖಾತ್ರಿಗೆ ನೆರವಾಗಲು ಸಿದ್ಧವಾಗಿದೆ ಎಂದು ಫಥಾಲಿ ಹೇಳಿದ್ದಾರೆ.

error: Content is protected !!
Scroll to Top